ಪ್ರಧಾನಿ ಹುದ್ದೆ ಬಿಟ್ಟುಕೊಡಿ, ಇಲ್ಲದಿದ್ದರೆ ಇಳಿಸ್ತೀವಿ; ಮೋದಿಗೆ ಬಿಜೆಪಿ ನಾಯಕ ವಾರ್ನಿಂಗ್
ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು 75 ವರ್ಷವಾಗುತ್ತಿದ್ದಂತೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು. ಇಲ್ಲದಿದ್ದರೆ ಬೇರೆ ಮಾರ್ಗಗಳ ಮೂಲಕ ಆ ಹುದ್ದೆಯನ್ನು ಕಸಿದುಕೊಳ್ಳಲಾಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ..
ಸೆಪ್ಟೆಂಬರ್ 17ಕ್ಕೆ ಮೋದಿಯವರು 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.. ಇಂತಹ ಸಂದರ್ಭದಲ್ಲೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಹೇಈಕೆ ನೀಡಿರುವುದು ಸಂಚಲನಕ್ಕೆ ಕಾರಣವಾಗಿದೆ.. ಪಾರ್ಟಿ ಹಾಗೂ ಆರ್‌ಎಸ್‌ಎಸ್ ನಿಬಂಧನೆಗಳ ಪ್ರಕಾರ 75ವರ್ಷ ಮೇಲ್ಪಟ್ಟವರು ಅಧಿಕಾರದಲ್ಲಿರಬಾರದು. ಹೀಗಾಗಿ, ಮೋದಿಯವರು 75 ವರ್ಷವಾಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿಯಬೇಕು.. ಆಎಸ್‌ಎಸ್ ನಿಯಮಕ್ಕೆ ಬದ್ಧರಾಗಿರಬೇಕು. ಇಲ್ಲದಿದ್ದರೆ ಬೇರೆ ದಾರಿಗಳ ಮೂಲಕ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.. ಇದು ಸಾಕಷ್ಟು ವೈರಲ್ ಆಗುತ್ತಿದೆ..
ಹಿರಿಯರು ಅಧಿಕಾರ ಬಿಟ್ಟುಕೊಟ್ಟು ಯುವ ಸಮುದಾಯಕ್ಕೆ ಅವಕಾಶ ಕೊಡುವುದು ಬಿಜೆಪಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.. ಹೀಗಾಗಿ, ಮೋದಿಯವರು ತಮ್ಮ ಹುದ್ದೆ ತೊರೆಯಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ..
ಸುಬ್ರಮಣಿಯನ್ ಸ್ವಾಮಿಯವರು ಹಿರಿಯ ನಾಯಕರೇ ಆಗಿದ್ದರೂ ಅವರ ಮಾತುಗಳನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ.. ಈ ಹಿಂದೆಯೂ ಕೂಡಾ ಬಿಜೆಪಿ ಹಾಗೂ ಮೋದಿ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಹಲವಾರು ಹೇಳಿಕೆಗಳನ್ನು ನೀಡಿದ್ದರು.. ಹೀಗಿದ್ದರೂ, ಮೋದಿ ವಯಸ್ಸು ಹಾಗೂ ಅಧಿಕಾರದ ಬಗ್ಗೆ ಇವರ ಈ ಟ್ವೀಟ್ ಚರ್ಚೆಗೆ ಕಾರಣವಾಗುವುದಂತೂ ಸತ್ಯ..