ನದಿಯಲ್ಲಿ ಆಟವಾಡ್ತಿದ್ದ ಬಾಲಕನ ಮೇಲೆ ಮೊಸಳೆ ದಾಳಿ: ಸ್ಥಳೀಯರಿಂದ ರಕ್ಷಣೆ
ರಾಯಚೂರು: ಅಮ್ಮ ನದಿ ತಟದಲ್ಲಿ ಬಟ್ಟೆ ತೊಳೆಯುತ್ತಿದ್ರೆ ಪುಟ್ಟ ಬಾಲಕ ನೀರಿನಲ್ಲಿ ಆಡಲು ತೆರಳಿದ್ದಾನೆ. ಈ ವೇಳೆ ನೀರಿನಲ್ಲಿ ಆಹಾರಕ್ಕಾಗಿ ಹೊಂಚು ಹಾಕುತ್ತಿದ್ದ ಮೊಸಳೆ ದಿಡೀರ್ ಬಾಲಕನ ಮೇಲೆ ದಾಳಿ ಮಾಡಿದೆ.
ರಾಯಚೂರು ಜಿಲ್ಲೆಯ ಕೊರ್ತಗೊಂದ ಗ್ರಾಮದಲ್ಲಿ 9 ವರ್ಷದ ಬಾಲಕ ಪವನ್ ಮೇಲೆ ಮೊಸಳೆ ದಾಳಿ ನಡೆಸಿರುವ ಭಯಾನಕ ಘಟನೆ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕ ಪವನ್ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಕೊರ್ತಗೊಂದ ಗ್ರಾಮದಲ್ಲಿ ನಡೆಯುತ್ತಿದ್ದ ತಿಮ್ಮಪ್ಪ ಜಾತ್ರೆಗೆಂದು ಅಜ್ಜಿ ಮನೆಗೆ ಬಂದಿದ್ದ, ಜಾತ್ರೆ ಬಳಿಕ ಕುಟುಂಬಸ್ಥರ ಜೊತೆ ನದಿಗೆ ತೆರಳಿದ್ದ ವೇಳೆ,ಪೋಷಕರು ದಡದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಪವನ್ ನದಿಯಲ್ಲಿ ಆಟವಾಡಲು ತೆರಳಿದ್ದಾನೆ. ಕೂಡಲೇ ಅದೆಲ್ಲಿಂದಲೋ ಬಂದ ಭಯಾನಕ ಮೊಸಳೆ ಪವನ್ ಮೇಲೆ ದಾಳಿ ಮಾಡಿದೆ. ಕೂಡಲೇ ಸ್ಥಳೀಯರು ಗಮನಿಸಿ ಪವನ್ ನ್ನ ಮೊಸಳೆ ಬಾಯಿಂದ ರಕ್ಷಣೆ ಮಾಡಿದ್ದಾರೆ.
ಮೊಸಳೆ ಬಾಯಿ ಹಾಕಿದರಿಂದ ಬಾಲಕ ಪವನ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.