ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಚುನಾವಣೆಗೆ ನಿಲ್ಲೋದಿಲ್ವಂತೆ; ಏನಿದು ಹೊಸ ವರಸೆ..?
ಮೈಸೂರು; ಮೈಸೂರು ನಗರದಲ್ಲಿ ಕಾಂಗ್ರೆಸ್‌ನ ಪ್ರಬಲ ನಾಯಕರೆನಿಸಿಕೊಂಡವರು ತನ್ವೀರ್ ಸೇಠ್. ಎನ್.ಆರ್.ಕ್ಷೇತ್ರದಲ್ಲಿ ಅವರನ್ನು ಸೋಲಿಸೋರೇ ಇರಲಿಲ್ಲ. ಆದ್ರೆ ಈ ಬಾರಿ ಅವರೇ ಅಖಾಡದಲ್ಲಿ ಇರೋದಿಲ್ಲವಂತೆ. ಹಾಗಂತ ಅವರೇ ಹೇಳಿದ್ದಾರೆ. ಈ ಬಾರಿ ನಾನು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಅಂತ ಎಐಸಿಸಿಗೆ ಪತ್ರ ಬರೆದಿದ್ದಾರೆ. ತನ್ವೀರ್ ಸೇಠ್ ಅವರ ರಾಜಕೀಯ ನಿವೃತ್ತಿ ವಿಚಾರ ಕಾಂಗ್ರೆಸ್‌ಗೆ ಶಾಕ್ ನೀಡಿದೆ.
2019ರಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ದಾಳಿಯಾಗಿತ್ತು. ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ ವ್ಯಕ್ತಿಯೊಬ್ಬ ತನ್ವೀರ್ ಸೇಠ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದ. ಇದೇ ಕಾರಣ ನೀಡಿ ತನ್ವೀರ್ ಸೇಠ್ ಇದೀಗ ರಾಜಕೀಯ ನಿವೃತ್ತಿ ಬಯಸಿದ್ದಾರೆ. ನನ್ನ ಮೇಲೆ ಹಲ್ಲೆಯಾದಾಗಿನಿಂದ ನಾನು ಮಾನಸಿಕವಾಗಿ ಕುಗ್ಗಿದ್ದೇನೆ. ನನ್ನ ಆರೋಗ್ಯ ಕೂಡಾ ಸರಿ ಇಲ್ಲ. ಹೀಗಾಗಿ ನನಗೆ ಟಿಕೆಟ್ ಬೇಡ. ಆದ್ರೆ ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ ಅಂತ ಪತ್ರದಲ್ಲಿ ತಿಳಿಸಿದ್ದಾರೆ.
ತನ್ವೀರ್ ಸೇಠ್ ಅವರ ಈ ದಿಢೀರ್ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ತನ್ವೀರ್ ಸೇಠ್ ಅವರು ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಮುನಿಸಿಕೊಂಡಿದ್ದರು. ಇದೀಗ ಅವರು ಇಂತಹ ನಿರ್ಧಾರ ತೆಗೆದುಕೊಂಡಿರುವ ಚರ್ಚೆಗೆ ಕಾರಣವಾಗಿದೆ.