ನನ್ನ ನಾಮಪತ್ರ ತಿರಸ್ಕೃತವಾಗಲು ಷಡ್ಯಂತ್ರ ನಡೆದಿತ್ತು; ಡಿ.ಕೆ.ಶಿವಕುಮಾರ್
ಬಿಜೆಪಿ ಹಾಗೂ ಮಖ್ಯಮಂತ್ರಿ ಕಚೇರಿ ಹಾಗೂ ಕಾನೂನು ಘಟಕ ನನ್ನ ನಾಮಪತ್ರ ತಿರಸ್ಕೃತ ಆಗುವುದಕ್ಕೆ ಸಂಚು ರೂಪಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಸಲ್ಲಿಸಿರುವ ನಾಮಪತ್ರ ಜೊತೆ ನನ್ನ ಪ್ರಮಾಣ ಪತ್ರ ಸಲ್ಲಿಸಿದ್ದೆ. ಅದು ಅತಿಹೆಚ್ಚು ಡೌನ್‌ಲೋಡ್ ಆಗಿದೆ ಎಂದು ಹೇಳಿದರು.
ದೊಡ್ಡ ಕಾನೂನು ತಂಡವೇ ಕನಕಪುರದಲ್ಲಿತ್ತು. ನನ್ನ ನಾಮಪತ್ರ ತಿರಸ್ಕೃತವಾಗುವಂತೆ ನೋಡಿಕೊಳ್ಳುವ ಉದ್ದೇಶ ಅವರದ್ದಾಗಿತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನನ್ನದೇ ಅಲ್ಲ, ಹಲವು ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಡೌನ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.