CrimeNational

ಈ 3 ಗ್ರಾಮದಲ್ಲಿ ಕಳ್ಳತನ, ದರೋಡೆ ತರಬೇತಿ ಕೋರ್ಸ್‌ಗಳಿವೆಯಂತೆ!

ಮಧ್ಯಪ್ರದೇಶ(Madhyapradesh); ಎಂಜಿನಿಯರಿಂಗ್‌, ಎಂಬಿಬಿಎಸ್‌ ಹೀಗೆ ನಾನಾ ಕೋರ್ಸ್‌ಗಳನ್ನು ನೋಡಿದ್ದೇವೆ.. ಆದ್ರೆ ಇಲ್ಲಿ ಕಳ್ಳತನ, ಸುಲಿಗೆ, ದರೋಡೆ ಮಾಡೋದಕ್ಕೂ ಕೋರ್ಸ್‌ಗಳಿವೆ.. ಆದ್ರೆ ಇವು ಅಧಿಕೃತ ಅಂತೂ ಅಲ್ಲ.. ಅನಧಿಕೃತವಾಗಿಯೇ ರಾಜಾರೋಷವಾಗಿ ಇಂತಹ ಕೋರ್ಸ್‌ಗಳನ್ನು ಮಾಡಲಾಗುತ್ತಿದೆ.. ಇದಕ್ಕೆ ಪೋಷಕರು ಲಕ್ಷಾಂತರ ರೂಪಾಯಿ ಫೀಸ್‌ ಕಟ್ಟಿ ಸೇರಿಸುತ್ತಿದ್ದಾರೆ.. ಅಚ್ಚರಿ ಆದರೂ ಇದು ಸತ್ಯ.

ಇದನ್ನೂ ಓದಿ; ಪತ್ನಿ ಸಾವು, ಕೆರೆಗೆ ಹಾರಿದ ಪತಿ!; ಪತಿಯ ಮನೆಗೆ ಬೆಂಕಿ!

ಮಧ್ಯಪ್ರದೇಶದ ಭೋಪಾಲ್‌ನಿಂದ 117 ಕಿಲೋಮೀಟರ್‌ ದೂರದಲ್ಲಿ ಕಾದಿಯಾ, ಗುಲ್ಬೇದಿ ಹಾಗೂ ಹುಲ್ಖೇದಿ ಎಂಬ ಮೂರು ಗ್ರಾಮಗಳಿವೆ.. ಈ ಗ್ರಾಮಗಳಲ್ಲಿ ಕಳ್ಳತನ, ರಾಬರಿ, ಡಕಾಯಿತಿ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಂತೆ.. ಅದಕ್ಕಾಗಿಯೇ ಸ್ಪೆಷಲ್‌ ಕೋರ್ಸ್‌ಗಳಿದ್ದು, ಒಂದೊಂದು ಕೋರ್ಸ್‌ಗೂ ಮೂರು ಲಕ್ಷ ರೂಪಾಯಿವರೆಗೂ ಫೀಸ್‌ ಇದೆಯಂತೆ.. ಇದು ಅಕ್ರಮವಾದರೂ ಇಲ್ಲಿ ಈ ಟ್ರೈನಿಂಗ್‌ ರಾಜಾರೋಷವಾಗಿ ನಡೆಯುತ್ತಂತೆ.

ಇದನ್ನೂ ಓದಿ; ಆಟಿಕೆ ಎಂದು ಹಾವನ್ನು ಕಚ್ಚಿ ಸಾಯಿಸಿದ ಪುಟ್ಟ ಮಗು!

12, 13 ವರ್ಷದ ಮಕ್ಕಳನ್ನು ಅಪರಾಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಇಲ್ಲಿ ತರಬೇತಿ ನೀಡಲಾಗುತ್ತಿದೆ.. ಪೋಷಕರೇ ಇದಕ್ಕೆ ಹೆಚ್ಚು ಆಸಕ್ತಿ ತೋರುತ್ತಾರಂತೆ.. ಲಕ್ಷ ಲಕ್ಷ ಫೀಸ್‌ ಕಟ್ಟಿ ತಮ್ಮ ಮಕ್ಕಳನ್ನು ಇಲ್ಲಿ ಸೇರಿಸುತ್ತಾರಂತೆ.. ಜನನಿಬಿಡ ಪ್ರದೇಶದಲ್ಲಿ ಪಿಕ್‌ ಪಾಕೆಟ್‌ ಮಾಡೋದು ಹೇಗೆ, ಮಹಿಳೆಯರ ಬ್ಯಾಗ್‌ಗಳನ್ನು, ಆಭರಣಗಳನ್ನು ಎಗರಿಸೋದು ಹೇಗೆ, ಕದ್ದು ಓಡಿಹೋಗೋದು ಹೇಗೆ ಎಂಬುದರಿಂದ ಹಿಡಿದು ಹಲವು ಅಪರಾಧ ಪ್ರಕರಣಗಳಿಗೆ ಇಲ್ಲಿ ತರಬೇತಿ ಕೊಡಲಾಗುತ್ತಂತೆ.. ಒಂದು ವೇಳೆ ಸಿಕ್ಕಿಬಿದ್ದರೆ ಪೊಲೀಸರ ಲಾಠಿ ಏಟುಗಳನ್ನು ತಡೆದುಕೊಳ್ಳುವುದು ಹೇಗೆ ಅನ್ನೋದಕ್ಕೂ ಇಲ್ಲಿ ತರಬೇತಿ ಇದೆಯಂತೆ..

ಇದನ್ನೂ ಓದಿ; ಅದಕ್ಕೆ ಒಲ್ಲೆ ಪ್ರಿಯತಮ!; ಚಾಕುವಿನಿಂದ ದಾಳಿ ಮಾಡಿದ ಪ್ರಿಯತಮೆ!

ಇತ್ತೀಚೆಗೆ ದೆಹಲಿ ಮುಂತಾದ ಸ್ಥಳಗಳಲ್ಲಿ ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು.. ಈ ಪ್ರಕರಣಗಳ ಬೆನ್ನು ಹತ್ತಿದ ಪೊಲೀಸರಿಗೆ ಇಂತಹದ್ದೊಂದು ತರಬೇತಿ ಇದೆ ಅನ್ನೋದು ಗೊತ್ತಾಗಿದೆ.. ಇಲ್ಲಿ ತರಬೇತಿ ಪಡೆದವರು ಪರೀಕ್ಷೆ ಮಾಡಿ ನೋಡದೆಯೇ, ಅಕ್ಕಸಾಲಿಗ ನೋಡಿ ಹೇಳದೆಯೇ ಆಭರಣವನ್ನು ಮುಟ್ಟಿದಾಕ್ಷಣ ಅದು ಎಷ್ಟು ಕ್ಯಾರೆಟ್‌ ಚಿನ್ನ, ಎಷ್ಟು ತೂಕವಿದೆ, ಎಷ್ಟು ಬೆಲೆಬಾಳುತ್ತೆ ಎಲ್ಲವನ್ನೂ ಫರ್ಪೆಕ್ಟ್‌ ಆಗಿ ಹೇಳುತ್ತಾರಂತೆ..!

Share Post