UP Election : ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ , ಮಹಿಳೆಯರಿಗೆ ಶೇ40 ಮೀಸಲು
ನವದೆಹಲಿ : ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶೇಕಡಾ 40ರಷ್ಟು ಅಭ್ಯರ್ಥಿಗಳು ಮಹಿಳೆಯರಾಗಿದ್ದಾರೆ ಎನ್ನುವುದು ವಿಶೇಷ.
ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 125 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪ್ರಿಯಾಂಕಾ ಗಾಂಧಿ ಅವರು ಅಭ್ಯರ್ಥಿಗಳಲ್ಲಿ ಶೇ 40ರಷ್ಟು ಮಹಿಳೆಯರು ಮತ್ತು ಶೇ 40ರಷ್ಟು ಯುವಜನತೆಗೆ ಅವಕಾಶ ಕಲ್ಪಿಸಿದ್ದಾರೆ.
ಸಂಘ ಸಂಸ್ಥೆಗಳಿಂದ ಪತ್ರಕರ್ತರವರೆಗೂ, ಹೋರಾಟ ಮನೋಭಾವ ಹೊಂದಿರುವ ಮಹಿಳೆಯರನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ. 2017ರ ಉನ್ನಾವೋ ಸಂತ್ರಸ್ತೆಯ ತಾಯಿ ಆಶಾ ದೇವಿ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ನಡೆದ ಹೋರಾಟದಲ್ಲಿ ನೇತೃತ್ವ ವಹಿಸಿದ್ದ ಪೂನಂ ಪಾಂಡೆ ಅವರಿಗೆ ಟಿಕೆಟ್ ನೀಡಲಾಗಿದೆ.
In the first list of 125 candidates for UP polls, 50 candidates are women, including Asha Singh, mother of the Unnao rape victim. From Shahjahanpur, we have fielded Asha worker Poonam Pandey who led an agitation for a raise in honorarium: Congress leader Priyanka Gandhi Vadra pic.twitter.com/x9WrFsqzvb
— ANI UP/Uttarakhand (@ANINewsUP) January 13, 2022