ಹೆಚ್.ಡಿ.ರೇವಣ್ಣ, ಎ.ಮಂಜು ಕೂಡಾ ಅನರ್ಹರಾಗ್ತಾರೆ; ಪ್ರಮೀಳಾ ನೇಸರ್ಗಿ
ಬೆಂಗಳೂರು; ನಾಮಪತ್ರ ಸಲ್ಲಿಕೆ ವೇಳೆ ಸರಿಯಾದ ಮಾಹಿತಿ ಒದಗಿಸದೇ ಇದ್ದುದರಿಂದ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಅದರಂತೆ ಅವರ ತಂದೆ ಹೆಚ್.ಡಿ.ರೇವಣ್ಣ ಹಾಗೂ ಎ.ಮಂಜುನಾಥ್ ಕೂಡಾ ತಮ್ಮ ಶಾಸಕ ಸ್ಥಾನಗಳಿಂದ ಅನರ್ಹಗೊಳ್ಳಲಿದ್ದಾರೆ ಎಂದು ವಕೀಲೆಯೂ ಆಗಿರುವ ಬಿಜೆಪಿ ನಾಯಕಿ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಪ್ರಜ್ವಲ್ ರೇವಣ್ಣ ಅವರ ಈ ಅಕ್ರಮ ಕೆಲಸಕ್ಕೆ ಅವರ ತಂದೆ ಹೆಚ್.ಡಿ.ರೇವಣ್ಣ ಸಾಥ್ ನೀಡಿದ್ದಾರೆ. ಹೀಗಾಗಿ ಅವರೂ ಅನರ್ಹರಾಗಲಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಗೆ ಸ್ಪರ್ಧೆ ಮಾಡುವಾಗ ಆಸ್ತಿ, ಬ್ಯಾಂಕ್ ವಿವರ, ಜಮೀನು ಇತ್ಯಾದಿಗಳ ವಿವರಗಳನ್ನು ಸರಿಯಾಗಿ ನೀಡಬೇಕು. ಆದ್ರೆ ಪ್ರಜ್ವಲ್ ರೇವಣ್ಣ ಸರಿಯಾಗಿ ನೀಡಿರಲಿಲ್ಲ. ಇದಕ್ಕೆ ರೇವಣ್ಣ ಸಹಕಾರ ನೀಡಿದ್ದರು. ಹೀಗಾಗಿ ರೇವಣ್ಣ ಕೂಡಾ ತಪ್ಪಿತಸ್ಥರಾಗುತ್ತಾರೆ. ಅವರನ್ನೂ ಅನರ್ಹಗೊಳಿಸುವಂತೆ ನಾವು ಕೋರ್ಟ್ ಮೊರೆ ಹೋಗಿದ್ದೇವೆ. ಕೋರ್ಟ್ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮಂಜು ಕೂಡಾ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ ಅವರಿಗೂ ಕೋರ್ಟ್ ನೋಟಿಸ್ ನೀಡಿದೆ. ಹೀಗಾಗಿ ಈ ಇಬ್ಬರೂ ಅನರ್ಹಗೊಳ್ಳುತ್ತಾರೆ ಎಂದು ಪ್ರಮೀಳಾ ನೇಸರ್ಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.