BengaluruDistrictsPolitics

ಲೋಕಸಭೆಗೆ ಸ್ಪರ್ಧಿಸ್ತಾರಾ ಯತೀಂದ್ರ..?; ಸಿದ್ದರಾಮಯ್ಯ ನಿರಾಸಕ್ತಿ ತೋರಿಸ್ತಿರೋದು ಯಾಕೆ..?

ಬೆಂಗಳೂರು; ರಾಜ್ಯ ಸರ್ಕಾರಕ್ಕೆ ಕಾವೇರಿ ಸಂಕಷ್ಟ ಎದುರಾಗಿದೆ. ಏನೂ ಮಾಡಲಾಗದೆ ಸರ್ಕಾರ ಕೈಕಟ್ಟಿ ಕುಳಿತಿದೆ. ಇತ್ತ ಬಿಜೆಪಿ-ಜೆಡಿಎಸ್‌ ಇದೇ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಶುರು ಮಾಡಿವೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಕಾವೇರಿ ವಿಚಾರವನ್ನು ರಾಜಕೀಯವಾಗಿ ಚೆನ್ನಾಗಿ ಬಳಸಿಕೊಳ್ತಿವೆ. ಹೀಗಿರುವಾಗಲೇ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕಾದ ಅವಶ್ಯಕತೆ ಕಾಂಗ್ರೆಸ್‌ಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಸ್ಪರ್ಧೆ ಮಾಡೋದಕ್ಕೆ ಸಿದ್ಧತೆ ನಡೆಸಿದ್ದಾರೆ. ಆದ್ರೆ, ಸಿದ್ದರಾಮಯ್ಯ ಅವರು ತಮ್ಮ ಪುತ್ರನನ್ನು ಕಣಕ್ಕಿಳಿಸೋ ಬಗ್ಗೆ ತೀರ್ಮಾನ ಮಾಡೋದಕ್ಕೆ ಮೀನಾಮೇಷ ಎಣಿಸುತ್ತಿರುವಂತೆ ಕಾಣುತ್ತಿದೆ. 

ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಯಾಕಂದ್ರೆ ಚುನಾವಣೆಯಲ್ಲಿ ಸೋತರೆ ಯತೀಂದ್ರ ಅವರ ರಾಜಕೀಯ ಭವಿಷ್ಯ ಹಾಳಾಗಲಿದೆ. ಸಿದ್ದರಾಮಯ್ಯ ಅವರಿಗೆ ವಿರೋಧಿಗಳೆಲ್ಲಾ ಒಂದಾದರೆ ಸೋಲುವ ಸಾಧ್ಯತೆ ಬಗ್ಗೆ ಅರಿವಿದೆ. ಒಂದು ಕಡೆ ಬಿಜೆಪಿ-ಜೆಡಿಎಸ್‌ ಕೂಡಾ ಮೈತ್ರಿಯಾಗಿವೆ. ಈ ಹಿನ್ನೆಲೆಯಲ್ಲಿ ಯತೀಂದ್ರರನ್ನು ನಿಲ್ಲಿಸಿದರೆ ಗೆಲ್ಲುತ್ತಾರಾ ಎಂಬ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ,

ಯತೀಂದ್ರ ಅವರನ್ನು ನಿಲ್ಲಿಸಲು ಪಕ್ಷದ ಸ್ಥಳೀಯ ನಾಯಕರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಯತೀಂದ್ರ ಕೂಡಾ ಈ ಬಗ್ಗೆ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಆದ್ರೆ ಸಿದ್ದರಾಮಯ್ಯ ಅವರು ಮಾತ್ರ ಇನ್ನೂ ಈ ಬಗ್ಗೆ ಮೌನ ವಹಿಸಿದ್ದಾರೆ.

Share Post