BengaluruPolitics

ಜುಲೈ 19ರಿಂದ ಗೃಹಲಕ್ಷ್ಮೀ ಯೋಜನೆಗೆ ಆಫ್‌ಲೈನ್‌ ಅರ್ಜಿ; ದುಡ್ಡು ಕೇಳಿದ್ರೆ ಕ್ರಮ – ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು; ಗೃಹಲಕ್ಷ್ಮೀ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಫ್ಟ್‌ವೇರ್‌ ಡೆವೆಲಪ್‌ ಆಗುತ್ತಿದೆ ಎಂದು ಹೇಳುತ್ತಿದ್ದ ಸರ್ಕಾರ, ಈಗ ವರಸೆ ಬದಲಾಯಿಸಿದೆ. ಸಾಫ್ಟ್‌ವೇರ್‌ ಡೆವೆಲಪ್‌ ಆಗದ ಕಾರಣ ಆಫ್‌ಲೈನ್‌ನಲ್ಲಿ ಮೊದಲ ಒಂದು ಅರ್ಜಿ ಸ್ವೀಕಾರ ಮಾಡಲು ತೀರ್ಮಾನ ಮಾಡಿದೆ. ಈ ಬಗ್ಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಸೋಮವಾರ ಸಂಜೆ ಅಥವಾ ಜುಲೈ 19ರಿಂದ ಆಫ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದ್ದಾರೆ.

ಈಗಾಗಲೇ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಲಿಸ್ಟ್‌ ನಮ್ಮ ಕೈಯಲ್ಲಿದೆ. ಎಲ್ಲಾ ಫಲಾನುಭವಿಗಳಿಗೂ ನಾವು ಮೆಸೇಜ್‌ ಕಳುಹಿಸುತ್ತೇವೆ. ಆಗ ಅವರು ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ಮೊದಲಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಬ್ಯಾಂಕ್‌ ಪಾಸ್‌ ಬುಕ್‌ ಮತ್ತಿತರ ದಾಖಲೆಗಳೊಂದಿಗೆ ಕರ್ನಾಟಕ ಒನ್‌, ಬೆಂಗಳೂರು ವನ್‌, ಗ್ರಾಮ ವನ್‌ನಲ್ಲಿ ಸಲ್ಲಿಸಲು ಅವಕಾಶ ಇರುತ್ತದೆ. ಅಪ್ಲಿಕೇಷನ್‌ ಸಂಪೂರ್ಣ ಉಚಿತವಾಗಿರುತ್ತದೆ. ಯಾರಾದರೂ ಹಣ ಕೇಳಿದರೆ ದೂರು ಕೊಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳಿದೆ.

ಇದರಲ್ಲಿ ಮಧ್ಯವರ್ತಿಗಳಿಗೆ ನಾನು ಅವಕಾಶ ಕೊಡುವುದಿಲ್ಲ. ಯಾರಾದರೂ ಮಧ್ಯವರ್ತಿಗಳು ಬಂದರೆ ಅವರ ವಿರುದ್ಧ ದೂರು ನೀಡಬಹುದು ಎಂದು ಸಚಿವರು ಹೇಳಿದ್ದಾರೆ. 8147500500 ಅಥವಾ 1902ಗೆ ಕೂಡಾ ಕರೆ ಮಾಡಿ ದೂರು ಕೊಡಬಹುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Share Post