Politics

ಕ್ರಾಸ್‌ ವೋಟಿಂಗ್‌ ಸಂಕಷ್ಟ; ಹಿಮಾಚಲಕ್ಕೆ ಹಾರಿದ ಕಾಂಗ್ರೆಸ್‌ ಟ್ರಬಲ್‌ ಶೂಟರ್‌!

ಬೆಂಗಳೂರು; ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ 6 ಜನ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಮತ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಅಲ್ಲಿನ ಕಾಂಗ್ರೆಸ್‌ ಸರ್ಕಾರಕ್ಕೂ ಅಪಾಯದ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು, ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಶಾಸಕರ ಜೊತೆ ಮಾತನಾಡಲು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಿಮಾಚಲ ಪ್ರದೇಶಕ್ಕೆ ಹಾರಿದ್ದಾರೆ.

ಇದನ್ನೂ ಓದಿ; Breathing Exercises; ಉಸಿರಾಟ ವ್ಯಾಯಾಮದ 7 ಪ್ರಯೋಜನಗಳೇನು..?

ಮಲ್ಲಿಕಾರ್ಜುನ ಖರ್ಗೆ ಸೂಚನೆ ಮೇರೆಗೆ ಡಿಕೆಶಿ ಪ್ರವಾಸ;

ಮಲ್ಲಿಕಾರ್ಜುನ ಖರ್ಗೆ ಸೂಚನೆ ಮೇರೆಗೆ ಡಿಕೆಶಿ ಪ್ರವಾಸ; ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸಂಖ್ಯಾಬಲ ಹೊಂದಿತ್ತು. ಎಲ್ಲರೂ ಕೂಡಾ ಕಾಂಗ್ರೆಸ್‌ ಅಭ್ಯರ್ಥಿಗೇ ಮತ ಹಾಕಿದ್ದರೆ ಕಾಂಗ್ರೆಸ್‌ ಗೆಲ್ಲಬಹುದಿತ್ತು. ಆದ್ರೆ 6 ಕಾಂಗ್ರೆಸ್‌ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸೋಲಾಗಿದೆ. ಗೆಲ್ಲುವಷ್ಟು ಸಂಖ್ಯಾಬಲ ಹೊಂದಿರದಿದ್ದರೂ ಇಲ್ಲಿ ಬಿಜೆಪಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ಸಿಎಮ ಸುಖವಿಂಧರ್‌ ಸೀಂಗ್‌ ಸುಖು ರಾಜೀನಾಮೆಗೆ ಆಗ್ರಹ ಕೇಳಿಬರುತ್ತಿದೆ. ಕೆಲ ಕಾಂಗ್ರೆಸ್‌ ಶಾಸಕರು ಕೂಡ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಪತನವಾಗುವ ಭಿತಿ ಕಾಂಗ್ರೆಸ್‌ಗೆ ಎದುರಾಗಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಹಿಮಾಚಲಕ್ಕೆ ಕಳುಹಿಸಿದ್ದಾರೆ.

ಇದನ್ನೂ ಓದಿ; New Rules; ಮಾರ್ಚ್‌ 1 ರಿಂದ ಹೊಸ ರೂಲ್ಸ್‌; ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ!

ಕಾಂಗ್ರೆಸ್‌ ಪರ ಸ್ಪರ್ಧಿಸಿದ್ದ ಅಭಿಷೇಕ್‌ ಮನು ಸಿಂಘ್ವಿ;

ಕಾಂಗ್ರೆಸ್‌ ಪರ ಸ್ಪರ್ಧಿಸಿದ್ದ ಅಭಿಷೇಕ್‌ ಮನು ಸಿಂಘ್ವಿ; ಹಿಮಾಚಲ ಪ್ರದೇಶದಿಂದ ಆಯ್ಕೆ ಬಯಸಿ ಕಾಂಗ್ರೆಸ್‌ನ ಹಿರಿಯ ನಾಯಕ  ಅಭಿಷೇಕ್ ಮನು ಸಿಂಘ್ವಿ ಸ್ಪರ್ಧೆ ಮಾಡಿದ್ದರು. ಆದ್ರೆ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದು, ಇಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಈ ನಡುವೆ ಕೆಲ ಕಾಂಗ್ರೆಸ್‌ ಶಾಸಕರು ಸಿಎಂ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಬಿಕ್ಕಟ್ಟು ಎನ್‌ಕ್ಯಾಶ್‌ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ.  ಹಿಮಾಚಲದ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿದ್ದು, ಸಿಎಂ ಸುಖವಿಂದರ್ ಸಿಂಗ್ ಸುಖು ಅವರಿಗೆ ವಿಶ್ವಾಸಮತಯಾಚಿಸುವಂತೆ ಸೂಚಿಸಬೇಕೆಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಮಾಚಲದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗುವ ಭೀತಿಯಲ್ಲಿದೆ.

ಇದನ್ನೂ ಓದಿ; Pakistan Slogan; ಪಾಕಿಸ್ತಾನ ಪರ ಘೋಷಣೆ ವಿಚಾರ; ವಿಧಾನಸಭೆಯಲ್ಲಿ ವಾಗ್ಯುದ್ಧ

ಟ್ರಬಲ್‌ ಶೂಟರ್‌ ಎಂದೇ ಡಿಕೆಶಿ ಖ್ಯಾತಿ;

ಟ್ರಬಲ್‌ ಶೂಟರ್‌ ಎಂದೇ ಡಿಕೆಶಿ ಖ್ಯಾತಿ; ಡಿ.ಕೆ.ಶಿವಕುಮಾರ್‌ ಈ ಹಿಂದೆ ಹಲವು ಬಾರಿ ಇಂತಹ ಸನ್ನಿವೇಶಗಳನ್ನು ನಿಭಾಯಿಸಿದ್ದಾರೆ. ಹೈಕಮಾಂಡ್‌ ಕೊಟ್ಟ ಆದೇಶವನ್ನು ಪಾಲಿಸಿದ್ದಾರೆ. ಈ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರು ಅಡ್ಡಮತದಾನ ಮಾಡುವ ಭೀತಿಯಿಂದ ಗುಜರಾತ್‌ ಶಾಸಕರನ್ನು ಬೆಂಗಳೂರಿಗೆ ಕರೆತಂದಿದ್ದರು.. ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ಅವರನ್ನು ಇರಿಸಿ, ಕಾಂಗ್ರೆಸ್‌ ಶಾಸಕರನ್ನು ರಕ್ಷಣೆ ಮಾಡಿದ್ದರು. ಅನಂತರ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಂಡಿದ್ದರು. ಇದಲ್ಲದೆ ಹಲವು ಇಂತಹ ಸನ್ನಿವೇಶಗಳನ್ನು ನಿಭಾಯಿಸಿದ್ದಾರೆ. ಹೀಗಾಗಿ, ಹಿಮಾಚಲ ಪ್ರದೇಶದ ರಾಜಕೀಯ ಸನ್ನಿವೇಶವನ್ನು ನಿಭಾಯಿಸಿ ಸರ್ಕಾರ ಉಳಿಸುತ್ತಾರೆ ಎಂಬ ವಿಶ್ವಾಸವಿಟ್ಟು ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರನ್ನು ಹಿಮಾಚಲಕ್ಕೆ ಕಳುಹಿಸಿದೆ.

ಇದನ್ನೂ ಓದಿ; Pakistan Slogan; ಪಾಕಿಸ್ತಾನ ಪರ ಘೋಷಣೆ ವಿವಾದ; ಕಾಂಗ್ರೆಸ್‌ ನಾಯಕರು ಏನಂತಾರೆ..?

ಸಚಿವ ರಾಜೀನಾಮೆ, ಹಲವು ಶಾಸಕರ ರಾಜೀನಾಮೆ ಸಾಧ್ಯತೆ;

ಸಚಿವ ರಾಜೀನಾಮೆ, ಹಲವು ಶಾಸಕರ ರಾಜೀನಾಮೆ ಸಾಧ್ಯತೆ; ಈಗಾಗಲೇ ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.. ಇನ್ನು ಅಡ್ಡ ಮತದಾನ ಮಾಡಿರುವ ಶಾಸಕರು ಸೇರಿ ಹಲವು ಕಾಂಗ್ರೆಸ್‌ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಮನವೊಲಿಸುವ ಹೊಣೆಗಾರಿಕೆ ಡಿ.ಕೆ.ಶಿವಕುಮಾರ್‌ ಮೇಲಿದೆ. ಇದನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನು ನೋಡಬೇಕು.

 

Share Post