ಗಾಂಧಿ ಪುಣ್ಯ ಸ್ಮರಣೆಯಲ್ಲೂ ರಾಮನಾಮ ಜಪ ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು; ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲದ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಹೋಗಿರಲಿಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಅಂದು ಬೆಂಗಳೂರಿನಲ್ಲಿ ಶ್ರೀರಾಮ ದೇವಸ್ಥಾನವೊಂದರಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ನಾನೂ ಶ್ರೀರಾಮನ ಭಕ್ತ ಎಂದು ಹೇಳಿದ್ದರು. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದೀಗ ಅವರು ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಶ್ರೀರಾಮನ ಜಪ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಶ್ರೀರಾಮನ ಆದರ್ಶಗಳ ಬಗ್ಗೆ ಮಾತನಾಡಿದ್ದಾರೆ. ಮಹಾತ್ಮಾಗಾಂಧಿಯವರು ಸಾಯುವಾಗ ಹೇ ರಾಮ್ ಎಂದು ಉಚ್ಚಾರ ಮಾಡಿದ್ದರು. ರಾಮನ ಹೆಸರು ಹೇಳುತ್ತಲೇ ಪ್ರಾಣತ್ಯಾಗ ಮಾಡಿದ್ದರು. ಅದಕ್ಕೇ ಅವರು ಯಾವಾಗಲೂ ಘು ಪತಿ ರಾಘವ ರಾಜಾ ರಾಂ ಪತೀತ ಪಾವನ ಸೀತಾ ರಾಂ ಎಂದು ಹೇಳುತ್ತಿದ್ದರು. ಗಾಂಧೀಜಿಯವರು ಯಾವಾಗಲೂ ಶ್ರೀರಾಮನ ಬಗ್ಗೆ ಅಪಾರವಾದ ಭಕ್ತಿ ಹೊಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.