Politics

ಹೈಕೋರ್ಟ್‌ ಜಡ್ಜ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧಿಸಿದ್ದ ಅಭಿಜಿತ್‌ ಗೆದ್ದರಾ..?

ಪಶ್ಚಿಮಬಂಗಾಳ; ಪಶ್ಚಿನ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾಜರ್ನಿ ವಿರುದ್ಧ ಸಿಡಿದೆದ್ದು ಹೈಕೋರ್ಟ್‌ ಜಡ್ಜ್‌ ಸ್ಥಾನಕ್ಕೇ ರಾಜಿನಾಮೆ ನೀಡಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ನ್ಯಾ.ಅಭಿಜಿತ್‌ ಗಂಗೋಪಾಧ್ಯಾಯ ಪ್ರಚಂಡ ಗೆಲುವು ಸಾಧಿಸಿದ್ದಾರೆ.. ಅವರು ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬರೋಬ್ಬರಿ 77,733 ಮತಗಳ ಅಂತರದಿಂದ ಗೆಲುವು ಸಾಧಿಸಿ, ಮಮತಾ ಬ್ಯಾನರ್ಜಿ ವಿರುದ್ಧದ ಶಪಥದಲ್ಲಿ ಗೆದ್ದಿದ್ದಾರೆ..

ಅಭಿಜಿತ್‌ ಗಂಗೋಪಾಧ್ಯಾಯ ಅವರು ಕೋಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದರು.. ಅವರು ನೀಡಿದ್ದ ಕೆಲವೊಂದು ತೀರ್ಪುಗಳ ಬಗ್ಗೆ ಟಿಎಂಸಿ ನಾಯಕ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರು.. ಜೊತೆಗೆ ಮಮತಾ ನೀಡಿದ್ದ ಕೆಲ ಹೇಳಿಕೆಗಳು ನ್ಯಾಯಮೂರ್ತಿ ಅಭಿಜಿತ್‌ ಅವರ ಮನಸ್ಸಿಗೆ ಘಾಸಿ ಮಾಡಿದ್ದವು.. ಹೀಗಾಗಿ ಅವರು ಚಾಲೆಂಜ್‌ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಎಂಸಿ ಪಕ್ಷ ಭದ್ರಕೋಟೆ ತಮ್ಲುಕ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.. ಟಿಎಂಸಿ ಅಭ್ಯರ್ಥಿ ದೇಬಾಂಗ್ಶು ಭಟ್ಟಾಚಾರ್ಯ ವಿರುದ್ಧ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ..

ಕಳೆದ ಮೂರು ಬಾರಿಯಿಂದ ಇಲ್ಲಿ ಟಿಎಂಸಿ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾ ಬಂದಿದ್ದರು.. ಇದೀಗ ಅಭಿಜಿತ್‌ ಗಂಗೋಪಾಧ್ಯಾಯ ಅವರು ತಮ್ಲುಕ್‌ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.. ಅಭಿಜಿತ್‌ ಗಂಗೋಪಾಧ್ಯಾಯ ಅವರು 7,65,584 ಮತಗಳನ್ನು ಗಳಿಸಿದರೆ, ಭಟ್ಟಾಚಾರ್ಯ ಅವರು 6,87,851 ಮತಗಳನ್ನು ಗಳಿಸಿ ಸೋಲನುಭವಿಸಿದ್ದಾರೆ.. ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ತಮ್ಲುಕ್ ಲೋಕಸಭಾ ಕ್ಷೇತ್ರದಲ್ಲಿ ಶೇ.84.79ರಷ್ಟು ಮತದಾನವಾಗಿತ್ತು..

 

Share Post