NationalPolitics

ನರೇಂದ್ರ ಮೋದಿ ಸಂಪುಟದಲ್ಲಿದ್ದ ಬರೋಬ್ಬರಿ 16 ಸಚಿವರಿಗೆ ಹೀನಾಯ ಸೋಲು!

ನವದೆಹಲಿ; 400 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಹೊರಟಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣೆಯಲ್ಲಿ ಸಾಕಷ್ಟು ಪಾಠ ಕಲಿತಿದೆ.. ಕಳೆದ ಬಾರಿ ಬಿಜೆಪಿ ಒಂದೇ 303 ಸ್ಥಾನಗಳಲ್ಲಿ ಗೆದ್ದಿತ್ತು.. ಆದ್ರೆ ಈ ಬಾರಿ ಬಿಜೆಪಿ 242 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡದರೆ, ಎನ್‌ಡಿಎ ಒಟ್ಟು 292 ಸ್ಥಾನ ಗಳಿಸಿದೆ.. ಹೀಗಾಗಿ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.. ಇನ್ನು ಮೋದಿ ಸಂಪುಟದಲ್ಲಿದ್ದ 16 ಸಚಿವರು ಕೂಡಾ ಸೋಲನುಭವಿಸಿದ್ದಾರೆ.. ಒಂದು ಕಡೆ ಪ್ರಧಾನಿ ಮೋದಿಯವರ ಗೆಲುವಿನ ಅಂತ ತುಂಬಾನೇ ಕಡಿಮೆಯಾಗಿದೆ.. ಅಯೋಧ್ಯೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ..

ಸೋಲನುಭವಿಸಿದ ಸಚಿವರು ಯಾರು ಯಾರು..?

೧. ಸ್ಮೃತಿ ಇರಾನಿ – ಉತ್ತರ ಪ್ರದೇಶದ ಅಮೇಥಿಯಿಂದ ಹೀನಾಯ ಸೋಲು

೨. ರಾಜೀವ್ ಚಂದ್ರಶೇಖರ್ – ಕೇರಳದ ತಿರುವನಂತಪುರಂನಿಂದ ಅಲ್ಪ ಮತಗಳಲ್ಲಿ ಸೋಲು

೩. ಸುಭಾಷ್ ಸರ್ಕಾರ್ ಪಶ್ಚಿಮ ಬಂಗಾಳದ ಬಂಕುರಾ ಕ್ಷೇತ್ರದಿಂದ ಸೋಲು

೪. ಮುರುಗನ್ ತಮಿಳುನಾಡಿನ ನೀಲಗಿರಿಯಲ್ಲಿ ಹೀನಾಯ ಸೋಲು

೫. ಕೈಲಾಶ್ ಚೌಧರಿ – ಬಾರ್ಮರ್ ಕ್ಷೇತ್ರದಿಂದ ಸೋಲು

೬. ಅಜಯ್ ಮಿಶ್ರಾ – ಉತ್ತರ ಪ್ರದೇಶದ ಖೇರಿ ಕ್ಷೇತ್ರದಿಂದ ಸೋಲು

೭. ಅರ್ಜುನ್ ಮುಂಡಾ ಜಾರ್ಖಂಡ್‌ ಖುಂತಿ ಕ್ಷೇತ್ರದಿಂದ ಸೋಲು

೮. ಭಗವಂತ ಖೂಬಾ ಬೀದರ್‌ನಲ್ಲಿ ಸಾಗ‌ರ್ ಖಂಡ್ರೆ ವಿರುದ್ಧ ಸೋಲು

೯. ನಿಸಿತ್ – ಕೂಚ್ ಬೆಹಾರ್ ಕ್ಷೇತ್ರದಿಂದ ಸೋಲು

೧೦. ಸಂಜೀವ್ ಬಲ್ಯಾನ್ ಸಮಾಜವಾದಿ ಪಾರ್ಟಿ ವಿರುದ್ಧ ಸೋಲು

೧೧. ಕೌಶಲ್ ಕಿಶೋರ್ – ಮೋಹನ್‌ ಲಾಲ್‌ ಗಂಜ್ ಕ್ಷೇತ್ರದಿಂದ ಸೋಲು

೧೨. ಮಹೇಂದ್ರ ನಾಥ್ ಪಾಂಡೆ – ಸಮಾಜವಾದಿ ಪಾರ್ಟಿ ವಿರುದ್ಧ ಸೋಲು

೧೩. ಕಪಿಲ್ ಪಾಟೀಲ್ ಮಹಾರಾಷ್ಟ್ರದ ಭಿವಂಡಿಯಿಂದ ಸೋಲು

೧೪. ರಾವ್ಹಾಹೇಬ್ ದಾನೆ – ಜಲ್ಲಾ ಕ್ಷೇತ್ರದಿಂದ ಸೋಲು

೧೫. ಭಾರತಿ ಪವಾರ್ ಎನ್ ಸಿಪಿ ಅಭ್ಯರ್ಥಿ ವಿರುದ್ಧ ಹೀನಾಯ ಸೋಲು

 

Share Post