Politics

ಮೋದಿ ಮೋದಿ ಅನ್ನೋರಿಗೆ ಮನೆಯಲ್ಲಿ ಊಟ ಹಾಕಬೇಡಿ; ಕೇಜ್ರಿವಾಲ್‌

ನವದೆಹಲಿ; ಮೋದಿ, ಮೋದಿ ಎಂದು ಜಪ ಮಾಡುವ ಗಂಡಂದಿರಿಗೆ ಮನೆಯಲ್ಲಿ ಹೆಣ್ಣು ಮಕ್ಕಳು ಊಟ ಹಾಕಬಾರದು ಎಂದು ದೆಹಲಿ ಸಿಎಂ ಹಾಗೂ ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯ ಸಮಯದಲ್ಲಿ ಹೊಸ ವಿವಾದವನ್ನು ಸೃಷ್ಟಿ ಮಾಡಿದ್ದಾರೆ.

ಮಹಿಳಾ ಸಮಾವೇಶದಲ್ಲಿ ಕೇಜ್ರಿವಾಲ್‌ ವಾಗ್ದಾಳಿ;

ಮಹಿಳಾ ಸಮಾವೇಶದಲ್ಲಿ ಕೇಜ್ರಿವಾಲ್‌ ವಾಗ್ದಾಳಿ; ಅರವಿಂದ ಕೇಜ್ರಿವಾಲ್‌ ಹಾಗೂ ಮೋದಿ ನಡುವೆ ಮೊದಲಿನಿಂದಲೂ ಫೈಟ್‌ ಇದ್ಧೇ ಇದೆ.. ಕೇಜ್ರಿವಾಲ್‌ ಯಾವಾಗಲೂ ಮೋದಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.. ಇದೀಗ ಲೋಕಸಭಾ ಚುನಾವಣೆ ಬೇರೆ ಹತ್ತಿರಕ್ಕೆ ಬಂದಿದೆ.. ಇಂತ ಸಂದರ್ಭದಲ್ಲಿ ರಾಜಕಾರಣಿಗಳ ಮಾತಿನ ಸಮರ ಜೋರಾಗಿಯೇ ಇರುತ್ತದೆ. ಅದೇ ರೀತಿ ದೆಹಲಿಯ ಟೌನ್‌ ಹಾಲ್‌ ನಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಅವರು ಮಾತನಾಡಿದ್ದು, ಈ ವೇಳೆ ಮೋದಿ ವಿರುದ್ಧ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.

ಮೋದಿ ಎನ್ನುವ ಗಂಡಂದಿರಿಗೆ ಊಟ ಹಾಕಲ್ಲ ಎಂದು ಶಪಪಥ ಮಾಡಿ;

ಮೋದಿ ಎನ್ನುವ ಗಂಡಂದಿರಿಗೆ ಊಟ ಹಾಕಲ್ಲ ಎಂದು ಶಪಪಥ ಮಾಡಿ; ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅರವಿಂದ್‌ ಕೇಜ್ರಿವಾಲ್‌ ಅವರು, ದೆಹಲಿಯ ಮಹಿಳೆಯರು ಇವತ್ತು ಒಂದು ಶಪಥ ಮಾಡಬೇಕು. ಯಾರ ಗಂಡಂದಿರುವ ಮೋದಿ ಮೋದಿ ಎಂದು ಜಪ ಮಾಡುತ್ತಾರೋ ಅವರಿಗೆ ಮನೆಗೆ ಬಂದಾಗ ಊಟ ಹಾಕಬಾರದು. ಮೋದಿ ಮೋದಿ ಎನ್ನುವ ಗಂಡಂದಿರಿಗೆ ಊಟ ನೀಡುವುದಿಲ್ಲ ಎಂದು ಹೇಳಿ ಎಂದು ಮಹಿಳೆಯರಿಗೆ ಅರವಿಂದ ಕೇಜ್ರಿವಾಲ್‌ ಕರೆ ನೀಡಿದರು.

 ನಿಮ್ಮ ಗಂಡಂದಿರಿಗೆ ನೀವೇ ಬುದ್ಧಿ ಕಲಿಸಿ;

ನಿಮ್ಮ ಗಂಡಂದಿರಿಗೆ ನೀವೇ ಬುದ್ಧಿ ಕಲಿಸಿ; 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ತಿಂಗಳಿಗೆ 1000 ರೂಪಾಯಿ ನೀಡುತ್ತೇನೆ ಎಂದು ನಾವು ಹೇಳಿದ್ದೆವು. ಇದೀಗ ಆ ಯೋಜನೆ ಜಾರಿ ಮಾಡಿದ್ದೇವೆ. ಫಲಾನುಭವಿಗಳಿಗೆ ಈಗಾಗಲೇ ಹಣ ನೀಡಲಾಗಿದೆ. ನಾವು ಬಜೆಟ್‌ ನಲ್ಲಿ ಹೇಳಿದಂತೆ ಆ ಯೋಜನೆಯನ್ನು ಜಾರಿ ಮಾಡಿದ್ದೇವೆ. ಹೀಗಾಗಿ ಎಲ್ಲರೂ ಎಎಪಿ ಪರವಾಗಿ ನಿಲ್ಲಬೇಕು ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಹಲವಾರು ಗಂಡಸರು ಯಾವಾಗಲೂ ಬರೀ ನರೇಂದ್ರ ಮೋದಿಯ ಜಪ ಮಾಡುತ್ತಿದ್ದಾರೆ. ಯಾವ ಗಂಡಂದಿರುವ ಹೀಗೆ ಮೋದಿ ಭಜನೆ ಮಾಡುತ್ತಾರೋ ಅವ್ರಿಗೆ  ನೀವೇ ಬುದ್ಧಿ ಕಲಿಸಬೇಕು. ಮೋದಿ ಹೆಸರು ಹೇಳಿದರೆ ಊಟ ಕೊಡಲ್ಲ ಎಂದ ಹೇಳಬೇಕು. ಈ ಬಗ್ಗೆ ಮಹಿಳೆಯರೇ ನಿಮ್ಮ ಗಂಡಂದಿರಿಂದ ಪ್ರಮಾಣ ಮಾಡಿಸಿಕೊಳ್ಳಬೇಕು. ಆಮ್‌ ಆದ್ಮಿ ಪಾರ್ಟಿ ಗೆಲ್ಲಿಸುವ ಬಗ್ಗೆಯೂ ವಾಗ್ದಾನ ತೆಗೆದುಕೊಳ್ಳಬೇಕು ಎಂದೂ ಕೇಜ್ರಿವಾಲ್‌ ಹೇಳಿದ್ದಾರೆ.

 

Share Post