BengaluruPolitics

Modi Road Show; ಪ್ರಧಾನಿ ಮೋದಿ ರೋಡ್‌ ಶೋ ಶುರು; ಇವತ್ತು ಎಲ್ಲೆಲ್ಲಿ ಸಂಚಾರ..?

ಬೆಂಗಳೂರು; ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಶುರುವಾಗಿದೆ. ಸುಮಾರು 26.5 ಕಿಲೋ ಮೀಟರ್‌ ರೋಡ್‌ ಶೋ ನಡೆಯಲಿದ್ದು, ತೆರೆದ ವಾಹನದಲ್ಲಿ ಮೋದಿ ಸಂಚರಿಸುತ್ತಿದ್ದಾರೆ. ಮೋದಿ ಜೊತೆಗೆ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್‌ ಇದ್ದಾರೆ. ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್‌ ವರೆಗೆ ಈ ರೋಡ್‌ ಶೋ ನಡೆಯುತ್ತದೆ.

ಮೋದಿ ರೋಡ್‌ ಶೋ ಇವತ್ತು ಈ ದಾರಿಯಲ್ಲಿ ಸಂಚರಿಸುತ್ತದೆ. ಶ್ರೀ ಸೋಮೇಶ್ವರ ಸಭಾ ಭವನ, ಜೆಪಿ ನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಚೌಕ, ಮಲ್ಲೇಶ್ವರಂ ವೃತ್ತ, 18ನೇ ಅಡ್ಡ ರಸ್ತೆ ಜಂಕ್ಷನ್, ಸಂಪಿಗೆ ರಸ್ತೆ

 

 

Share Post