CrimeDistrictsPolitics

ಕೆಆರ್‌ಪಿಪಿ ಪಕ್ಷದ ಪರ ಪ್ರಚಾರ; ನಾಲ್ವರು ಕಾಂಗ್ರೆಸ್‌ ಪುರಸಭಾ ಸದಸ್ಯರು ಅನರ್ಹ

ರಾಯಚೂರು; ಕಾಂಗ್ರೆಸ್‌ ಪಕ್ಷದ ಅಧಿಕೃತ ಚಿಹ್ನೆಯಡಿ ಆಯ್ಕೆಯಾಗಿದ್ದ ನಾಲ್ವರು ಲಿಂಗಸುಗೂರು ಪುರಸಭೆ ಸದಸ್ಯರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಬಹಿರಂಗವಾಗಿ ಜನಾರ್ದನರೆಡ್ಡಿ ನೇತೃತ್ವದ ಕೆಆರ್‌ಪಿಸಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರು. ಇದು ಸಾಬೀತಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯ, ಆ ನಾಲ್ವರು ಪುರಸಭಾ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದೆ. 

ಫಾತೀಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ ಅನರ್ಹಗೊಂಡ ಕಾಂಗ್ರೆಸ್‌ ಸದಸ್ಯರು. ಇವರು ವಿಧಾನಸಭಾ ಚುನಾವಣೆ ವೇಳೆ ಕೆಆರ್‌ಪಿಸಿ ಪಕ್ಷದ ಅಭ್ಯರ್ಥಿ ಪರವಾಗಿ ಬಹಿರಂಗವಾಗಿ ಪ್ರಚಾರ ನಡೆಸಿದ್ದರು. ಈ ಸಂಬಂಧ ಲಿಂಗಸುಗೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ದೂರು ನೀಡಿದ್ದರು. ಪಕ್ಷ ವಿರೋಧ ಚಟುವಟಿಕೆ ಹಿನ್ನೆಲೆಯಲ್ಲಿ ಸದಸ್ಯತ್ವ ರದ್ದು ಮಾಡಬೇಕೆಂದು ಕೋರಿದ್ದರು. ವಿಚಾರಣೆ ನಡೆಸಿದ ಡಿಸಿ ಕೋರ್ಟ್‌, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರ ಸದಸ್ಯತ್ವವನ್ನು ಅನರ್ಹ ಮಾಡಲಾಗಿದೆ.

Share Post