DistrictsPolitics

ನನ್ನ ಹೆಣ ಬೀಳಿಸಿ ಬಿಜೆಪಿಯವರು ಚುನಾವಣೆ ಗೆಲ್ಲುವ ಪ್ಲ್ಯಾನ್‌; ಪ್ರಿಯಾಂಕ್‌ ಆರೋಪ

ಕಲಬುರಗಿ; ಬಿಜೆಪಿಯವರು ಗಲಭೆ ಸೃಷ್ಟಿ ಮಾಡಿ, ಆ ಮೂಲಕ ಚುನಾವಣೆ ಗೆಲ್ಲೋಕೆ ಹೊರಟಿದ್ದಾರೆ.. ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲಬೇಕು ಎಂಬ ಪ್ಲ್ಯಾನ್‌ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆಯವರು ಗಂಭೀರ ಆರೋಪ ಮಾಡಿದ್ದಾರೆ.. ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಜೀವಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ಎನ್ಕೌಂಟರ್‌ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪ ಮಾಡಿದ್ದಾರೆ..

ಇದನ್ನೂ ಓದಿ; ಲಂಡನ್‌ನಲ್ಲಿ ವಿರಾಟ್‌ ಕೊಹ್ಲಿ ಸಾಮಾನ್ಯನಂತೆ 2 ತಿಂಗಳು ಓಡಾಡಿದ್ದರಂತೆ!

ಹೆಣ ಬೀಳಿಸಿ ಚುನಾವಣೆ ಗೆಲ್ಲೋಕೆ ಪ್ಲ್ಯಾನ್‌;

ನನಗೆ ಜೀವ ಬೆದರಿಕೆ ಪತ್ರ ಬಂದಿದ್ದೆ ಎಂದು ಆ ಪತ್ರ ತೋರಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ಕೂಡಾ ಕೊಟ್ಟಿದ್ದಾರೆ.. ಜೊತೆಗೆ ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನೂ ಮಾಡಿದ್ದಾರೆ.. ಚುನಾವಣೆಯಲ್ಲಿ ಗೊಂದಲ, ಗಲಬೆ ಸೃಷ್ಟಿಸುವ ಪ್ಲ್ಯಾನ್‌ ನಡೆಯುತ್ತಿದೆ.. ನನ್ನ ಸಾಯಿಸಿಯಾದರೂ ಸರಿ, ಇಲ್ಲಿ ಚುನಾವಣೆ ಗೆಲ್ಲುವುದಕ್ಕೆ ತಂತ್ರಗಾರಿಕೆ ಮಾಡುತ್ತಿದ್ದಾರೆ.. ಅವರ ಆಟ ನಡೆಯೋದಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಇದೇ ವೇಳೆ ಹೇಳಿದ್ದಾರೆ..

ಇದನ್ನೂ ಓದಿ; ಕುಡಿಯುವ ನೀರಿಗಾಗಿ ಜಗಳ; 21 ವರ್ಷದ ಯುವಕನ ಹತ್ಯೆ!

ಪಿನ್‌ಲ್ಯಾಂಡ್‌ನಿಂದ ಬಂದಿದೆ ಬೆದರಿಕೆ ಪತ್ರ;

ಪ್ರಿಯಾಂಕ್‌ ಖರ್ಗೆಯವರಿಗೆ ಪಿನ್‌ಲ್ಯಾಂಡ್‌ನಿಂದ ಒಂದು ಬೆದರಿಕೆ ಪತ್ರ ಬಂದಿದೆ.. ಅದರಲ್ಲಿ ನಿಮ್ಮನ್ನು ಎನ್‌ಕೌಂಟರ್‌ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ.. ರಾಜಕೀಯವಾಗಿ ಬಿಜೆಪಿಯವರಿಗೆ ನಮ್ಮನ್ನು ಎದುರಿಸುವುದಕ್ಕೆ ಆಗುತ್ತಿಲ್ಲ.. ಹೀಗಾಗಿ ಅವರು ಈ ರೀತಿಯ ತಂತ್ರಗಾರಿಕೆಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆರೋಪ  ಮಾಡುತ್ತಿದ್ದಾರೆ.. ಪಿನ್‌ಲ್ಯಾಂಡ್‌ ನಿಂದ ಪತ್ರದ ಹಿಂದೆ ಬಿಜೆಪಿಯವರೇ ಇದ್ದಾರೆ ಎಂಬುದು ಕೂಡಾ ಪ್ರಿಯಾಂಕ್‌ ಖರ್ಗೆಯವರ ಆರೋಪ.

ಇದನ್ನೂ ಓದಿ; ಹೋಳಿ ಆಚರಣೆ ವೇಳೆ ಬೈಕ್‌ನಲ್ಲಿ ಹುಚ್ಚಾಟ; 80,500 ರೂಪಾಯಿ ದಂಡ!

ಪತ್ರದಲ್ಲಿ ಏನಿದೆ ಗೊತ್ತಾ..?

“ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗು, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.. “ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ” ಎಂದೂ ಪತ್ರದಲ್ಲಿ ಬರೆಯಲಾಗಿದೆ.

ಮಾರ್ಷ್‌ 13ರಂದು ಕೂಡಾ ಬಂದಿತ್ತು ಬೆದರಿಕೆ ಪತ್ರ;

ಮಾರ್ಚ್ 13 ರಂದು ಕೂಡಾ ಒಂದು ಬೆದರಿಕೆ ಪತ್ರ ಬಂದಿತ್ತು.. ಹೀಗಾಗಿ ಅಂದೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಹೆದರಿಸುವುದು ಅಥವಾ ಬೆದರಿಸುವುದು ಮಾಡುತ್ತಿದ್ದಾರೆ.. ಆದ್ರೆ ಇದಕ್ಕೆ ನಾನು ಜಗ್ಗುವುದಿಲ್ಲ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ಹೇಳುತ್ತಿದ್ದಾರೆ.. ಚುನಾವಣೆಯಲ್ಲಿ ನೇರವಾಗಿ ಗೆಲ್ಲಲು ಆಗದವರು ಹೀಗೆ ಬೆದರಿಕೆ ಹಾಕುತ್ತಿದ್ದಾರೆ.. ಇದಕ್ಕೆ ನಾನು ಹೆದರೋದಿಲ್ಲ.. ಚುನಾವಣೆಯಲ್ಲಿಯೇ ಅಂತಹವರಿಗೆ ಪಾಠ ಕಲಿಸುತ್ತೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ; ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಬಳಿ ಇತ್ತು 5 ಕೆಜಿ ಚಿನ್ನ!

======

ರಾಜಕೀಯ ಸುದ್ದಿಗಳಿಗಾಗಿ ಭೇಟಿ ಕೊಡಿ;

ರಾಜಕೀಯ ಸುದ್ದಿಗಳು, ರಾಜ್ಯದ ಇತರೆ ಸುದ್ದಿಗಳಿಗಾಗಿ ನೀವು kannada.newsx.comಗೆ ಭೇಟಿ ನೀಡಬಹುದು.. ಇಲ್ಲಿ ನಿಮಗೆ ವಿಶ್ವಾಸಾರ್ಹ ಸುದ್ದಿಗಳು ಸಿಗುತ್ತವೆ.. ನಾವು ಯಾವುದಕ್ಕೂ ವೈಭವೀಕರಿಸಿ ಬರೆಯೋದಿಲ್ಲ.. ಸುದ್ದಿಗಳು ವಸ್ತುನಿಷ್ಠ ಹಾಗೂ ಸತ್ಯವಾಗಿರುತ್ತವೆ.. ಎಲ್ಲಾ ಸುದ್ದಿಗಳನ್ನು ನಾವು ವಿವರವಾಗಿ ಬರೆಯುತ್ತೇವೆ.. ಘಟನೆಯ ಸಂಪೂರ್ಣ ಮಾಹಿತಿ ಸುದ್ದಿಯಲ್ಲಿರುತ್ತದೆ.. ಹೀಗಾಗಿ ಖಚಿತ ಮಾಹಿತಿಗಾಗಿ ಈ ನ್ಯೂಸ್‌ ಎಕ್ಸ್‌ ಕನ್ನಡ ವೆಬ್‌ ಸೈಟ್‌ಗೆ ಭೇಟಿ ನೀಡಬಹುದು..

 

 

Share Post