ಸುದೀಪ್ ರಾಜಕೀಯ ಪಕ್ಷ ಸೇರುತ್ತಿಲ್ಲ, ಆದ್ರೆ ನನಗೆ ಅಂದ್ರೆ ನನ್ನ ಪಕ್ಷಕ್ಕೆ ಬೆಂಬಲಿಸ್ತಿದ್ದಾರೆ; ಸಿಎಂ ಬೊಮ್ಮಾಯಿ
ಬೆಂಗಳೂರು; ನಟ ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿಲ್ಲ. ಆದ್ರೆ ಅವರು ನನನ್ನು ಬೆಂಬಲಿಸಲಿದ್ದಾರೆ. ಅಂದ್ರೆ ನನ್ನ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲಿನ ಪ್ರೀತಿಯಿಂದ ಸುದೀಪ್ ನನ್ನ ಪರ ನಿಲ್ಲುತ್ತಿದ್ದಾರೆ. ಅದರ ಅರ್ಥ ಅವರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.
ಮಾಧ್ಯಮಗಳು ನಿನ್ನೆಯೇ ನಿರೀಕ್ಷೆ ಮಾಡಿದ್ದವು. ಅದು ಸತ್ಯವಾಗಿದೆ. ಸುದೀಪ್ ಚಿತ್ರರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಅವರ ಬೆಂಬಲ ನಮಗಿರಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಸುದೀಪ್ ಅವರು ನಮಗೆ ಬೆಂಬಲ ನೀಡುತ್ತಿರುವುದರಿಂದ ನಮಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ರಾಜ್ಯಾದ್ಯಂತ ಈಗಾಗಲೇ ದೊಡ್ಡ ಸಂಚಲನವೊಂಟಾಗಿದೆ ಎಂದು ಬೊಮ್ಮಾಯಿ ಇದೇ ವೇಳೆ ಹೇಳಿದರು.