BengaluruPolitics

ಪ್ರಿಯಾಂಕ್‌ ವಿರುದ್ಧದ ಸಿಎ ಸೈಟ್‌ ಮಂಜೂರು ಆರೋಪ; ಸರ್ಕಾರಕ್ಕೆ ರಾಜ್ಯಪಾಲರ ಪತ್ರ!

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಆಯ್ತು, ಈಗ ಸಚಿವ ಪ್ರಿಯಾಂಕ್‌ ಖರ್ಗೆಗೂ ಸಂಕಷ್ಟ ಶುರುವಾಗುವಂತೆ ಕಾಣುತ್ತಿದೆ.. ಸಿದ್ಧಾರ್ಥ ಟ್ರಸ್ಟ್‌ಗೆ ಕೆಐಎಡಿಬಿ ವತಿಯಿಂದ ಸಿಎ ನಿವೇಶವನನ್ನು ಪ್ರಭಾವ ಬಳಸಿ ಮಂಜೂರು ಮಾಡಲಾಗಿದೆ ಎಂಬ ಆರೋಪ ಸಚಿವ ಪ್ರಿಯಾಂಕ್‌ ಖರ್ಗೆ ಮೇಲಿದೆ.. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಪ್ರಕರಣ ಸಂಬಂಧ ವಿವರಣೆ ಕೇಳಿದ್ದಾರೆ..

ಇದನ್ನೂ ಓದಿ; ಹಸುವಿನ ಮೇಲೆ ಆ್ಯಸಿಡ್, ಕಾದ ಎಣ್ಣೆ ಸುರಿದ ದುಷ್ಕರ್ಮಿಗಳು!

ಸಿದ್ಧಾರ್ಥ ವಿಹಾರ ಟ್ರಸ್ಟ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಂಬಂಧಿಗಳು ಟ್ರಸ್ಟಿಗಳಾಗಿದ್ದಾರೆ.. ಈ ಟ್ರಸ್ಟ್‌ಗೆ ಕಾನೂನು ಮೀರಿ ಕೆಐಎಡಿಬಿಯಿಂದ 5 ಎಕರೆ ಸಿಎ ನಿವೇಶನ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.. ಪ್ರಿಯಾಂಕ್‌ ಖರ್ಗೆಯವರು ಸಚಿವರಾಗಿರುವಾಗಲೇ ಈ ಸರ್ಕಾರಿ ಸೌಲಭ್ಯ ಪಡೆದಿದ್ದು, ಇದು ಕಾನೂನು ಬಾಹಿರ ಎಂದು ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು.. ಈ ಸಂಬಂಧ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ..

ಇದನ್ನೂ ಓದಿ; ಯೋಗಾ ಹೆಸರಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಯೋಗಗುರು!

 

Share Post