CrimeNational

ಗಂಡ ತನ್ನಿಷ್ಟದ ತಿಂಡಿ ಮಾಡಲಿಲ್ಲ ಅಂತ ಹೆಂಡತಿ ಮಾಡಿದ್ದೇನು ಗೊತ್ತಾ..?

ಗ್ವಾಲಿಯರ್‌(Madhyapradesh); ಹೆಂಡತಿ ಸರಿಯಾಗಿ ಅಡುಗೆ ಮಾಡಲಿಲ್ಲ ಅಂದ್ರೆ ಹಲ್ಲೆ ಮಾಡಿದ್ದು, ಕೊಲೆ ಕೂಡಾ ಮಾಡಿದ್ದನ್ನು ಉದಾಹರಣೆಗಳನ್ನೂ ನೋಡಿದ್ದೇವೆ.. ಗಂಡಂದಿರುವ ಅಷ್ಟೇ ಹೆಂಡತಿಯರು ಕೂಡಾ ಅದೇ ರೀತಿ ವರ್ತಿಸುತ್ತಾರೆ ಅನ್ನೋದಕ್ಕೆ ಈ ಸ್ಟೋರಿ ಉದಾಹರಣೆ.. ಗಂಡ ಬೆಳಗಿನ ತಿಂಡಿಗೆ ತನ್ನಿಷ್ಟದ ಅವಲಕ್ಕಿ ಮಾಡದೇ ಡ್ರೈಫ್ರೂಟ್ಸ್‌ ಕೊಟ್ಟಿದ್ದಕ್ಕೆ ಹೆಂಡತಿ ಆಕ್ರೋಶಗೊಂಡಿದ್ದಾರೆ.. ಗಂಡನ ವಿರುದ್ಧ ಮುನಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.. ಮಧ್ಯಪ್ರದೇಶದ ಗ್ವಾಲಿಯರ್‌ನ ಮುರಾರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಯೋಗಾ ಹೆಸರಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಯೋಗಗುರು!

ಕವಿತಾ ಎಂಬ ಮಹಿಳೆ ತನ್ನ ಗಂಡನಿಗೆ ಬೆಳಗಿನ ತಿಂಡಿಗೆ ಪೋಹಾ ಮಾಡಲು ಹೇಳಿದ್ದಾಳೆ.. ಆದ್ರೆ ಗಂಡ ಪೂಹಾ ಮಾಡದೇ ಡ್ರೈಫ್ರೂಟ್ಸ್‌ ನೀಡಿದ್ದಾನೆ.. ಇದರಿಂದ ಬೇಸತ್ತ ಆಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.. ಬಾಲ್ಕಿಷನ್‌ ಜನೌದ್‌ ಎಂಬುವವರು ಒಂದು ವರ್ಷದ ಹಿಂದೆ ಕವಿತಾ ಅವರನ್ನು ಮದುವೆಯಾಗಿದ್ದರು ಎಂದು ತಿಳಿದುಬದಿದೆ.. ಇಬ್ಬರೂ ಕೂಡಾ ಸಂತೋಷದಿಂದೇ ಜೀವನ ಸಾಗಿಸುತ್ತಿದ್ದರು.. ಬಹುತೇಕ ಸಂದರ್ಭದಲ್ಲಿ ಗಂಡನೇ ಅಡುಗೆ ಮಾಡಿಕೊಡುತ್ತಿದ್ದರು ಎಂದು ತಿಳಿದುಬಂದಿದೆ..
ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಶಾಸಕರ ಮನೆಗೆ ನುಗ್ಗಿದ ಕಳ್ಳರ ಗುಂಪು!; ಅವರು ಕದ್ದಿದ್ದು ಕೇಳಿದ್ರೆ ನಗಾಡ್ತೀರಿ!

Share Post