ಯೋಗಾ ಹೆಸರಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಯೋಗಗುರು!
ಚಿಕ್ಕಮಗಳೂರು; ಅಮೆರಿಕ ಪೌರತ್ವ ಪಡೆದಿರುವ ಎನ್‌ಆರ್‌ಐ ವೈದ್ಯೆ ಮೇಲೆ ಯೋಗಾಗುರುವೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.. ಮೂಲತಃ ಪಂಜಾಬಿನವರಾದ ವೈದ್ಯೆ ಅಮೆರಿಕದಲ್ಲಿ ನೆಲೆಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಯೋಗಾಗುರುವಿನ ಬಳಿ ಯೋಗಾ ಕಲಿಯಲು ಬಂದಿದ್ದಾಗ, ಯೋಗಾಗುರು ಅತ್ಯಾಚಾರ ಎಸಗಿದ್ದಾನೆ ಎಂದು ಅರೋಪಿಸಲಾಗಿದೆ.. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ..
ಇದನ್ನೂ ಓದಿ; ಶಾಸಕರ ಮನೆಗೆ ನುಗ್ಗಿದ ಕಳ್ಳರ ಗುಂಪು!; ಅವರು ಕದ್ದಿದ್ದು ಕೇಳಿದ್ರೆ ನಗಾಡ್ತೀರಿ!
ಚಿಕ್ಕಮಗಳೂರು ಜಿಲ್ಲೆ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಕೇವಲ ಎಂಬ ಆಶ್ರಮದಲ್ಲಿ ಈ ಘಟನೆ ನಡೆದಿದೆ.. ಪಂಜಾಬ್ ಮೂಲದ ಎನ್‌ಆರ್‌ಐ ವೈದ್ಯೆ ಮೂರು ತಿಂಗಳ ಹಿಂದೆ ಕೇವಲ ಆಶ್ರಮಕ್ಕೆ ಯೋಗಾ ಮತ್ತು ಧ್ಯಾನ ಕಲಿಯಲು ಬಂದಿದ್ದರು.. ಅಮೆರಿಕದಿಂದ ಬಂದಿದ್ದ ಈಕೆಗೆ ಯೋಗಾಗುರು ಪ್ರದೀಪ್ ಯೋಗಾ ಹಾಗೂ ಧ್ಯಾನ ಹೇಳಿಕೊಡುತ್ತಿದ್ದರು.. ಯೋಗಾ ಕಲಿಸುವ ನೆಪದಲ್ಲಿ ಸಲುಗೆ ಬೆಳೆಸಿದ ಪ್ರದೀಪ್ ವೈದ್ಯೆ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ.. ಸಾಲದು ಎಂಬಂತೆ ಬಲವಂತದಿಂದ ಅತ್ಯಾಚಾರ ಕೂಡಾ ಎಸಗಿದ್ದಾನಂತೆ..
ಇದನ್ನೂ ಓದಿ; ಗಂಡನನ್ನು ಕೊಂದು ಬಾತ್‌ರೂಮ್‌ನಲ್ಲಿ ಸಮಾಧಿ ಮಾಡಿದ ಪತ್ನಿ!
ಈ ಹಿನ್ನೆಲೆಯಲ್ಲಿ ವೈದ್ಯೆ ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪ್ರದೀಪ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..