NationalPolitics

Breaking; ಲೋಕಸಭೆ ವಿಪಕ್ಷ ನಾಯಕ ಅಧೀರ್‌ ರಂಜನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ!

ನವದೆಹಲಿ; ಕಾಂಗ್ರೆಸ್‌ ಪಕ್ಷಕ್ಕೆ ಹೊಡೆತದ ಮೇಲೆ ಹೊಡೆತ ಬೀಳುತ್ತಿದೆ. ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚವಾಣ್‌ ಸೇರಿದಂತೆ ಹಲವು ನಾಯಕರು ಲೋಕಸಭಾ ಚುನಾವಣೆ ಸನಿಹದಲ್ಲೇ ಪಕ್ಷಾಂತರ ಮಾಡಿದ್ದಾರೆ.. ಈ ಬೆನ್ನಲ್ಲೇ ಕಾಂಗ್ರೆಸ್‌ಗೆ ಮತ್ತೊಂದು ಆಘಾತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ, ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿಯವರೇ ಪಕ್ಷ ತೊರೆಯಲಿದ್ದಾರೆ. ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ದಟ್ಟವಾಗಿ ಹರಡಿವೆ..

ಇದನ್ನೂ ಓದಿ; Loksabha; ಚಿತ್ರದುರ್ಗಕ್ಕೆ ಮಾದಾರ ಚೆನ್ನಯ್ಯ ಶ್ರೀ, ಬೆಂ. ಗ್ರಾಮಾಂತರಕ್ಕೆ ಡಾ.ಸಿ.ಎನ್.ಮಂಜುನಾಥ್?

ಮಮತಾ ಜೊತೆ ಕಾಂಗ್ರೆಸ್‌ ಚರ್ಚೆಯೇ ಇದಕ್ಕೆ ಕಾರಣ;

ಮಮತಾ ಜೊತೆ ಕಾಂಗ್ರೆಸ್‌ ಚರ್ಚೆಯೇ ಇದಕ್ಕೆ ಕಾರಣ; ಪಶ್ಚಿಮ ಬಂಗಾಳದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಟಿಎಂಸಿ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು.. ಆದ್ರೆ ಇದೀಗ ಕಾಂಗ್ರೆಸ್‌ ನಾಯಕರು, ಸೀಟು ಹಂಚಿಕೆ ಕುರಿತಂತೆ ಮಮತಾ ಬ್ಯಾನರ್ಜಿ ಜೊತೆ ಚರ್ಚೆ ಶುರು ಮಾಡಿದ್ದಾರೆ. ಆದ್ರೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌಧರಿಯವರಿಗೂ ಮಮತಾ ಬ್ಯಾನರ್ಜಿಯವರಿಗೂ ವೈಮನಸ್ಯ ಇದೆ.. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜೊತೆ ಹೊಂದಾಣಿಕೆಯಾಗಬಾರದು ಅನ್ನೋದು ಅವರ ವಾದ.. ಆದ್ರೆ ಕಾಂಗ್ರೆಸ್‌ ನಾಯಕರು ಮಮತಾ ಜೊತೆ ಸೀಟು ಹಂಚಿಕೆ ಚರ್ಚೆ ಮಾಡುತ್ತಿರುವುದು ಅಧೀರ್‌ ರಂಜನ್‌ ಅವರಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಮಮತಾ ಜೊತೆ ಹೊಂದಾಣಿಕೆಯಾದರೆ ಅಧೀರ್‌ ರಂಜನ್‌ ಪಕ್ಷ ತೊರೆಯುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ; ಆಯೋಧ್ಯೆಯಿಂದ ವಾಪಸ್ಸಾಗುತ್ತಿದ್ದವರಿಗೆ ಬೆದರಿಕೆ; ರೈಲಿಗೆ ಬೆಂಕಿ ಹಚ್ಚುವ ಧಮ್ಕಿ!

ಹೈಕಮಾಂಡ್‌ಗೆ ಎಚ್ಚರಿಕೆ ಕೊಟ್ಟರಾ ಅಧೀರ್‌ ರಂಜನ್‌..?;

ಹೈಕಮಾಂಡ್‌ಗೆ ಎಚ್ಚರಿಕೆ ಕೊಟ್ಟರಾ ಅಧೀರ್‌ ರಂಜನ್‌..?; ಯಾವಾಗ ತೃಣಮೂಲ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನಾಯಕರು ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿದರೋ ಆಗ ಅಧೀರ್‌ ರಂಜನ್‌ ತೀವ್ರ ಸಿಟ್ಟಿಗೆದ್ದಿದ್ದಾರೆ.. ತಮ್ಮ ನಿಲುವನ್ನು ಈಗಗಾಲೇ ಅಧೀರ್‌ ರಂಜನ್‌ ಅವರು ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಟಿಎಂಸಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ನಾನು ಪಕ್ಷ ತೊರೆಯುತ್ತೇನೆ ಎಂದು ಅಧೀರ್‌ ರಂಜನ್‌ ಎಚ್ಚರಿಕೆ ನೀಡಿದ್ಧಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಇದರ ಜೊತೆಗೆ ಅವರು ಬಿಜೆಪಿ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಧೀರ್‌ ರಂಜನ್‌ ಅವರ ಈ ಬಿಗಿ ಪಟ್ಟು ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವು ತಂದಿರಿಸಿದೆ.

ಇದನ್ನೂ ಓದಿ; ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲ್ಲುತ್ತೆ; ಸಿದ್ದರಾಮಯ್ಯ

ನಿರಂತರ ವಾಗ್ದಾಳಿ ನಡೆಸುವ ಅಧೀರ್‌ ರಂಜನ್‌;

ನಿರಂತರ ವಾಗ್ದಾಳಿ ನಡೆಸುವ ಅಧೀರ್‌ ರಂಜನ್‌; ಲೋಕಸಭಾ ವಿಪಕ್ಷ ನಾಯಕ ಅಧೀರ್‌ ರಂಜನ್‌ ಅವರು ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷದ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿಕೊಂಡು ಬಂದಿದ್ದಾರೆ.. ಹೀಗಾಗಿ ಟಿಎಂಟಿಗೂ ಅಧೀರ್‌ ರಂಜನ್‌ ಅವರಿಗೂ ಹಾವು-ಮುಂಗಸಿ ಸಂಬಂಧ.. ಹೀಗಾಗಿ, ಪಶ್ಚಮ ಬಂಗಾಳದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಅಧೀರ್‌ ರಂಜನ್‌ ಅವರಿಗೆ ತೊಂದರೆಯಾಗೋದು ನಿಶ್ಚಿತ. ಈ ಹಿನ್ನೆಲೆಯಲ್ಲಿಯೇ ಅಧೀರ್‌ ರಂಜನ್‌ ಅವರು ಪಕ್ಷ ತೊರೆಯುವುದಕ್ಕೂ ಹಿಂಜರಿಯೋದಿಲ್ಲ ಎಂಬಂತಾಗಿದ್ದಾರೆ.

ಕಾಂಗ್ರೆಸ್‌ಗೆ 6 ಸ್ಥಾನ ನೀಡಲು ಮುಂದಾದ ಟಿಎಂಸಿ;

ಕಾಂಗ್ರೆಸ್‌ಗೆ 6 ಸ್ಥಾನ ನೀಡಲು ಮುಂದಾದ ಟಿಎಂಸಿ; ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳಿವೆ. ಇದರಲ್ಲಿ 6 ಸ್ಥಾನಗಳನ್ನಷ್ಟೇ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಟಿಎಂಸಿ ರೆಡಿಯಾಗಿದೆ. ಕಾಂಗ್ರೆಸ್‌ 6 ರಿಂದ 8 ಕ್ಷೇತ್ರಗಳನ್ನು ಕೇಳುತ್ತಿತ್ತು. ಆದ್ರೆ ಟಿಎಂಟಿ ಬರೀ 5 ಸ್ಥಾನ ನೀಡೋದಾಗಿ ಹೇಳುತ್ತಿತ್ತು. ಇದೀಗ ಇಬ್ಬರ ನಡುವೆ ಒಪ್ಪಂದ ಆಗಿ ಟಿಎಂಸಿ 36 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ 6 ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದು ಅಧೀರ್‌ ರಂಜನ್‌ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಹಿಂದೂ ದೇವಾಲಯಗಳಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌; ಆರ್‌.ಅಶೋಕ್

ಹಲವು ನಾಯಕ ಕಾಂಗ್ರೆಸ್‌ಗೆ ಗುಡ್‌ಬೈ;

ಹಲವು ನಾಯಕ ಕಾಂಗ್ರೆಸ್‌ಗೆ ಗುಡ್‌ಬೈ; ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ಗೆ ಹಲವು ಪ್ರಮುಖ ನಾಯಕರು ಗುಡ್‌ ಬೈ ಹೇಳಿದ್ದಾರೆ… ಜ್ಯೋತಿರಾದಿತ್ಯ ಸಿಂಧಿಯಾ, ಗುಲಾಂ ನಬಿ ಆಜಾದ್, ರೀಟಾ ಬಹುಗುಣ ಜೋಷಿ, ಕ್ಯಾಪ್ಟನ್ ಅಮರಿಂದರ್ ಸಿಂಗ್, ಆರ್‌ಪಿಎನ್ ಸಿಂಗ್, ಜಿತಿನ್ ಪ್ರಸಾದ್, ಬಾಬಾ ಸಿದ್ದಿಕಿ, ಮಿಲಿಂದ್ ದೇವ್​ಡಾ, ಅಶೋಕ್ ಚವಾಣ್, ಸುಶ್ಮಿತಾ ದೇವ್, ಅಶೋಕ್‌ ಚವಾಣ್‌, ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್, ಪ್ರಿಯಾಂಕಾ ಚತುರ್ವೇದಿ, ಜಿತಿನ್ ಪ್ರಸಾದ್, ಅಶೋಕ್ ತನ್ವರ್, ಹಿಮಂತ ಬಿಶ್ವ ಶರ್ಮಾ, ಸುನಿಲ್ ಜಾಖರ್ ಹೀಗೆ ಹಲವರು ಕಾಂಗ್ರೆಸ್‌ ತೊರೆದಿದ್ದಾರೆ. ಚುನಾವಣೆ ಹತ್ತಿರಕ್ಕೆ ಬರುತ್ತಿರುವಾಗ ಇನ್ನಷ್ಟು ನಾಯಕರು ಪಕ್ಷ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ.

 

Share Post