HealthNational

ಊಟದ ನಂತರ ಮಾವು ತಿಂದ ಯುವತಿ ಅನುಮಾಸ್ಪದ ಸಾವು..!

ಭೋಪಾಲ್; ಊಟದ ಜೊತೆ, ಊಟದ ಆದ ನಂತರ ಮಾವಿನ ಹಣ್ಣು ತಿನ್ನೋದು ಹಲವರ ಅಭ್ಯಾಸ. ಆದ್ರೆ ಇಲ್ಲಿ ಊಟದ ನಂತರ ಮಾವಿನ ಹಣ್ಣು ತಿಂದ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮಾವಿನ ಹಣ್ಣು ತಿಂದಿದ್ದಕ್ಕೆ ಈ ಸಾವಾಯಿತೋ, ಬೇರೆ ಏನು ಕಾರಣವೋ ಗೊತ್ತಿಲ್ಲ. ಆದ್ರೆ ಮಧ್ಯಾಹ್ನ ಊಟ ಮಾಡಿ, ನಂತರ ಮಾವಿನ ಹಣ್ಣು ತಿಂದ ಮೇಲೆ ಯುವತಿ ಇದ್ದಕ್ಕಿಂತೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ. ಅರ್ಚನಾ ಅಲೇರಿಯಾ ಎಂಬಾಕೆಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಜುಲೈ 8ರಂದು ಅರ್ಚನಾ ಅಸ್ವಸ್ಥಗೊಂಡಿದ್ದು, ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಮಧ್ಯಾಹ್ನ ಊಟ ಮುಗಿದ ಮೇಲೆ ಅರ್ಚನಾ ಮಾವಿನ ಹಣ್ಣು ತಿಂದಿದ್ದಳು. ಇದಾದ ಸ್ವಲ್ಪ ಹೊತ್ತಿನಲ್ಲೇ ಆಕೆಗೆ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ನಾವು ಸ್ಥಳೀಯ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ವೈದ್ಯರು ಒಂದಷ್ಟು ಮಾತ್ರೆಗಳನ್ನು ಕೊಟ್ಟಿದ್ದರು. ಆದ್ರೆ ಮನೆಗೆ ಬಂದ ಮೇಲೆ ಅರ್ಚನಾ ತಲೆತಿರುಗುತ್ತಿದೆ ಎಂದಳು. ಹೀಗಾಗಿ ಆಸ್ಪತ್ರೆಗೆ ಸೇರಿಸಿದೆವು ಎಂದು ಅರ್ಚನಾ ಮಾವ ತಿಳಿಸಿದ್ದಾರೆ.

Share Post