Politics

ಖಾಸಗೀಕರಣಕ್ಕೆ ವಿರೋಧ; ವಿಪಕ್ಷ ಸದಸ್ಯರಿಂದ ಪ್ರತಿಭಟನೆ

ನವದೆಹಲಿ: ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನ ಮಾಡುತ್ತಿರುವುದಕ್ಕೆ ವಿಪಕ್ಷಗಳ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯರು ಹಾಗೂ ಹಲವು ವಿರೋಧ ಪಕ್ಷಗಳ ಸಂಸದರು ಇಂದು ಬೆಳಗ್ಗೆ ಸಂಸತ್‌ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Share Post