ಮೇಕೆದಾಟು ಪಾದಯಾತ್ರೆ : ಡಿಕೆಶಿ ಮೇಲೆ ಮತ್ತೊಂದು ಕೇಸ್
ರಾಮನಗರ : ಡಿಕೆ ಶಿವಕುಮಾರ್ ಅವರು ನೆನ್ನೆ ಪಾದಯಾತ್ರೆ ಮಾಡುವ ವೇಳೆ ವಿಶ್ವೋದಯ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಕೆಲ ಸಮಯ ಕಳೆದರು. ಈಗ ಅದೇ ಡಿಕೆ ಶಿವಕುಮಾರ್ ಅವರಿಗೆ ಮುಳುವಾಗಿದೆ. ಮಕ್ಕಳೊಂದಿಗೆ ಡಿಕೆ ಶಿವಕುಮಾರ್ ಅವರು ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಈಗ ದೂರು ದಾಖಲಾಗಿದೆ.
ಸರ್ಕಾರದ ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡುತ್ತಿರುವ ಡಿಕೆ ಶಿವಕುಮಾರ್ ಆವರ ವಿರುದ್ಧ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಬರೆದಿರುವ ಪತ್ರ ಇಂತಿದೆ. ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ.
ನಿಮಗೆ ಕೇಳಿಸುತ್ತಿದೆಯಾ?
ಭವಿಷ್ಯದ ಕರ್ನಾಟಕದ ಕೂಗು ಮಾರ್ದನಿಸುತ್ತಿದೆ.
ಇದು ಹಕ್ಕಿನ ಹೋರಾಟ, ಗೆಲ್ಲುವುದು ದಿಟDo you hear this?
This the future of Karnataka speaking!
We will fight for our rights and win. #Mekedatu#NammaNeeruNammaHakku pic.twitter.com/j6PhExmahc— DK Shivakumar (@DKShivakumar) January 10, 2022