ಮೇಕೆದಾಟು ಪಾದಯಾತ್ರೆ : ಮೂರನೇ ದಿನದ ಪ್ಲಾನ್ ಹೀಗಿದೆ
ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ಎರಡನೇ ದಿನ ಮುಗಿಸಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕನಕಪುರ ನಗರದಿಂದ ಶುರುವಾಗುವ ಪಾದಯಾತ್ರೆಯು ಮಧ್ಯಾಹ್ನದ ಹೊತ್ತಿಗೆ ವೀರಭದ್ರ ದೇಗುಲದ ಬಳಿ ಆಗಮಿಸುತ್ತದೆ.
ಇಂದು ಒಟ್ಟು 14.5 ಕಿಲೋಮೀಟರ್ ಕ್ರಮಿಸಲಿದ್ದಾರೆ. ಕನಕಪುರ ತಾಲ್ಲೂಕಿನ ಚಿಕ್ಕೇನಹಳ್ಳಿಯಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಇನ್ನು ಪಾದಯಾತ್ರೆಗೆ ಇಂದು ಸಿದ್ಧರಾಮಯ್ಯ ಅವರು ಆಗಮಿಸುವ ನಿರೀಕ್ಷೆ ಇದೆ. ಜ್ವರದ ಕಾರಣ ನೆನ್ನೆ ಗೈರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ.
ರಾಜಕೀಯ ಸಲಹಾ ತಂಡದ ಸಲಹೆ ಮೇರೆಗೆ 3 ದಿನಗಳ ಕಾಲ ಡಿಕೆ ಶಿವಕುಮಾರ್ ಅವರು ಮೌನಕ್ಕೆ ಶರಣಾಗಲು ನಿರ್ಧರಿಸಿದ್ದಾರೆ. ಆದರೆ ಕಾರ್ಯಕರ್ತರು ಮತ್ತಿತರರು ಮಾತನಾಡಿ ನಮ್ಮ ಸಂದೇಶಗಳನ್ನು ಜನರಿಗೆ ಸಾರಬೇಕು ಇಲ್ಲವಾದರೆ ನಮ್ಮ ಸಂದೇಶ, ಉದ್ದೇಶಗಳು ಜನರಿಗೆ ತಲುಪುವುದಿಲ್ಲ ಎಂದು ಡಿಕೆ ಅವರಿಗೆ ಹೇಳಿದ್ದಾರೆ. ಅಂತಿಮ ನಿರ್ಧಾರ ಏನು ಎಂಬುದು ಕಾದು ನೋಡಬೇಕಿದೆ.