ಕಾಂಗ್ರೆಸ್ ನಾಯಕರು ಮತಬ್ಯಾಂಕ್‌ಗಾಗಿ ಅಯೋಧ್ಯೆಗೆ ಬರಲಿಲ್ಲ; ಅಮಿತ್ ಶಾ
ನವದೆಹಲಿ; ಮತಬ್ಯಾಂಕ್ ಹೋಗಿಬಿಡುತ್ತದೆ ಎಂಬ ಭಯದಿಂದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾಂಗ್ರೆಸ್ ನಾಯಕರು ಬರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ.. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ; ಮೊಸರನ್ನು ಹೀಗೆ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು!
ಕಾಂಗ್ರೆಸ್‌ನ ನಾಯಕರಿಗೆ ಮತಬ್ಯಾಂಕ್ ಭಯ;
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಹ್ವಾನ ನೀಡಲಾಗಿತ್ತು.. ಅವರು ಈ ಕಾರ್ಯಕ್ರಮಕ್ಕೆ ಬಂದರೆ ಅವರ ವೋಟ್ ಬ್ಯಾಂಕ್ ಎಲ್ಲಿ ಹೋಗಿಬಿಡುತ್ತದೋ ಎಂಬ ಭಯ ಅವರನ್ನು ಕಾಡುತ್ತಿತ್ತು.. ಇದೇ ಭಯದಲ್ಲಿ ಅವರು ಅಯೋಧ್ಯೆಯ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಅಮಿತ್ ಶಾ ಹೇಳಿದರು..
ಇದನ್ನೂ ಓದಿ; ದೆಹಲಿ ಮದ್ಯನೀತಿ ಹಗರಣ; ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಜಾಮೀನು
ದೇಶದ ಆರ್ಥಿಕತೆ 3ನೇ ಸ್ಥಾನಕ್ಕೆ ತರುವುದು ಗುರಿ;
ಐದು ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಅರಮನೆ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.. ಇದರಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.. ಈ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ 11 ನೇ ಸ್ಥಾನದಲ್ಲಿತ್ತು. ಈಗ ಭಾರತದ ಆರ್ಥಿಕತೆ 5 ನೇ ಸ್ಥಾನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಅದು ಮೂರನೇ ಸ್ಥಾನಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ; ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ; ಸಿಎಂ ಸಿದ್ದರಾಮಯ್ಯ
ಪಾಕ್‌ನಿಂದ ಬಂದು ಬಾಂಬ್ ಹಾಕುತ್ತಿದ್ದರು;
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ದೇಶದಲ್ಲಿ ಭೀತಿಯ ವಾತಾವರಣವಿತ್ತು.. ಪಾಕಿಸ್ತಾನದಿಂದ ಬಂದು ಬಅಂಬ್ ಹಾಕಿ ಹೋಗುತ್ತಿದ್ದರು.. ಇಷ್ಟೆಲ್ಲಾ ಆಗುತ್ತಿದ್ದರೂ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮೌನವಾಗಿಯೇ ಕೂರುತ್ತಿದ್ದರು. ಈಗ ಕಾಶ್ಮೀರದಲ್ಲಿ ಒಂದು ಸಣ್ಣ ಕಲ್ಲು ಕೂಡಾ ಬಿಸಾಡುವುದಕ್ಕೆ ಅವಕಾಶವಿಲ್ಲ. ಮೋದಿ ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದ್ದು ನೀವು ನೆನಪಿಸಿಕೊಳ್ಳಬಹುದು. ನಮಗೂ ಹಾಗೂ ಕಾಂಗ್ರೆಸ್‌ಗೂ ಇರೋ ವ್ಯತ್ಯಾಸ ಇದೇ ಎಂದು ಅಮಿತ್ ಶಾ ಹೇಳಿದರು..
ಇದನ್ನೂ ಓದಿ; ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ; ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?
ಹಿಂದಿನ ಪ್ರಣಾಳಿಕೆ ಭರವಸೆ ಈಡೇರಿಸಿದ್ದೇವೆ;
ನಾವು ಈ ಹಿಂದೆ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ಆರ್ಟಿಕಲ್ 370 ರದ್ದಾದರೆ ರಕ್ತ ಹರಿಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಆದ್ರೆ ರಾಹುಲ್ ಗಾಂಧಿಯವರೇ ಈಗ ಇರೋದು ಮೋದಿ ಸರ್ಕಾರ. ಮೋದಿ ಸರ್ಕಾರವಿರುವಾಗ ಅಂತಹ ಘಟನೆಗಳು ಏನೂ ನಡೆಯುವುದಿಲ್ಲ ಅನ್ನೋದು ನೆನಪಿಟ್ಟುಕೊಳ್ಳಿ ಎಂದು ಅಮಿತ್ ಶಾ ಹೇಳಿದರು.. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ್ದೇವೆ. ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಅಮಿತ್ ಶಾ ಆರೋಪಿಸಿದರು.
ಇದನ್ನೂ ಓದಿ; ನಿಮಗೆ ಕನಸಲ್ಲಿ ಇದೆಲ್ಲಾ ಕಾಣ್ತಿದೆಯಾ..?; ಹಾಗಾದ್ರೆ ಸಿರಿ, ಸಂಪತ್ತು ನಿಮ್ಮದಾಗಲಿದೆ!
ಇದಕ್ಕೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜತೆ ಸಭೆ ನಡೆಸಿದ್ದ ಅಮಿತ್ ಶಾ, ಲೋಕಸಭೆ ಚುನಾವಣೆ ಗೆಲ್ಲುವುದಕ್ಕಾಗಿ ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಿಂದುಳಿದ ವರ್ಗಗಳ ಮತ ಕ್ರೂಡೀಕರಣ ಸೇರಿ ಹಲವು ಸಲಹೆಗಳನ್ನು ಹಾಗೂ ನಿರ್ದೇಶನಗಳನ್ನು ಶಾ ರಾಜ್ಯ ಬಿಜೆಪಿ, ಜೆಡಿಎಸ್ ನಾಯಕರಿಗೆ ನೀಡಿದ್ದಾರೆ.