Politics

ಮತ್ತೆ ಡಿಕೆಶಿ ಬಾಯಲ್ಲಿ ಸಿಎಂ ಸ್ಥಾನದ ಮಾತು; ದೆಹಲಿಯಲ್ಲಾದ ತೀರ್ಮಾನ ಏನು..?

ಬೆಂಗಳೂರು; ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮತ್ತೆ ಒಕ್ಕಲಿಗರೊಬ್ಬರಿಗೆ ಸಿಎಂ ಸ್ಥಾನ ಒಲಿದುಬರುತ್ತಿದೆ.. ಒಕ್ಕಲಿಗರೆಲ್ಲಾ ನನ್ನನ್ನು ಬೆಂಬಲಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಕೋರಿದ್ದರು.. ಅದಾದ ಮೇಲೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಸಿಕ್ಕಿದ್ದು ಎಲ್ಲರಿಗೂ ಗೊತ್ತೇ ಇದೆ.. ಆದ್ರೆ ದೆಹಲಿಯಲ್ಲಿ ಅಂದು ಏನು ಮಾತಕತೆ ಆಗಿದೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ.. ಆದ್ರೆ ಡಿ.ಕೆ.ಶಿವಕುಮಾರ್‌ ಅವರು ಇಂದು ಮತ್ತೆ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದು, ದೆಹಲಿಯಲ್ಲಿ ನಡೆದ ಮಾತುಕತೆ ಬಗ್ಗೆಯೂ ಸಣ್ಣ ಸುಳಿವು ಕೊಟ್ಟಿದ್ದಾರೆ..

ಇದನ್ನೂ ಓದಿ; ವರ್ಷಕ್ಕೊಮ್ಮೆಯಾದರೂ ಈ 6 ರಕ್ತ ಪರೀಕ್ಷೆಗಳನ್ನು ಎಲ್ಲರೂ ಮಾಡಿಸಿಕೊಳ್ಳಬೇಕು..!

ಒಕ್ಕಲಿಗರ ಸಭೆಯಲ್ಲಿ ಮತ್ತೆ ಸಿಎಂ ಸ್ಥಾನದ ಮಾತು!;

ಇಂದು ಮೈಸೂರಿನಲ್ಲಿ ಒಕ್ಕಲಿಗರ ಸಭೆ ನಡೆಯಿತು.. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಸ್ಥಾನದ ಬಗ್ಗೆ ಮಾತಾಡಿ, ಮತ್ತೆ ಈ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ.. ದೆಹಲಿಯಲ್ಲಿ ಈ ಬಗ್ಗೆ ಈಗಾಗಲೇ ಚರ್ಚೆ ಆಗಿದೆ.. ಏನು ಆಗಬೇಕು ಅನ್ನೋದನ್ನು ಅಲ್ಲಿ ತೀರ್ಮಾನ ಮಾಡಿ ಆಗಿದೆ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್‌ ಅವರು ಮುಂದೆ ಸಿಎಂ ಆಗ್ತೀನಿ ಎಂಬಂತೆ ಮಾತನಾಡಿದ್ದಾರೆ.. ಹೀಗಾಗಿ, ಸಿದ್ದರಾಮಯ್ಯ ಸಿಎಂ ಮಾಡುವಾಗ ಏನು ಸಂಧಾನ ಆಯ್ತು..? ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕಾ..? ಬಿಟ್ಟುಕೊಡುವುದಾದರೆ ಯಾವಾಗ..? ಲೋಕಸಭಾ ಚುನಾವಣೆಯ ನಂತರವೇ ಅಥವಾ ಎರಡೂ ವರ್ಷದ ನಂತರವೇ..? ಎಂಬ ಪ್ರಶ್ನೆಗಳು ಎದ್ದಿವೆ..

ಇದನ್ನೂ ಓದಿ; ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಹೇಳಿಕೆ ವಿಚಾರ; ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?

5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ!;

ಕಳೆದ ವಿಧಾನಸಭಾ ಚುನಾವಣೆಗೂ ಮುಂಚೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಸಭೆ ನಡೆದಿತ್ತು.. ಈ ಸಭೆಯಲ್ಲಿ ಮತ್ತೆ ಒಕ್ಕಲಿಗರಿಗೆ ಸಿಎಂ ಸ್ಥಾನ ಅಲಂಕರಿಸುವ ಅವಕಾಶ ಒದಗಿ ಬರುತ್ತಿದೆ.. ಹೀಗಾಗಿ ನನಗೆ ಪ್ರೋತ್ಸಾಹ ನೀಡಿ ಎಂದು ಹೇಳಿದ್ದರು.. ಆದ್ರೆ, ಕಾರಣಾಂತರಗಳಿಂದ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗಲಿಲ್ಲ.. ಹೈಕಮಾಂಡ್‌ ಮಾತಿಗೆ ಡಿ.ಕೆ.ಶಿವಕುಮಾರ್‌ ಒಪ್ಪಿಕೊಳ್ಳಬೇಕಾಯಿತು.. ಆದ್ರೆ ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಡಿ.ಕೆ.ಶಿವಕುಮಾರ್‌ ಮತ್ತೆ ಸಿಎಂ ಸ್ಥಾನದ ವಿಚಾರ ಮಾತಾಡಿದ್ದಾರೆ.. ದೆಹಲಿಯಲ್ಲಿ ಈ ಬಗ್ಗೆ ಮಾತುಕತೆಯಾಗಿದೆ ಎಂದು ಹೇಳುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ..  ಕಾಂಗ್ರೆಸ್ ಸರ್ಕಾರ 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ ಎಂದು ಹೇಳುವ ಮೂಲಕ ಮತ್ತೊಮ್ಮೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಏನು ಆಗಬೇಕು ಅದು ತೀರ್ಮಾನ ಆಗಿದ್ದು, ಅದರ ಬಗ್ಗೆ ಚರ್ಚೆ ಬೇಡ, ಚರ್ಚೆ ಆಗೋದೂ ಬೇಡ ಎಂದಿದ್ದಾರೆ.

ಇದನ್ನೂ ಓದಿ; ಹೊಸ C-Voter ಸಮೀಕ್ಷೆ; ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು..?

ಸಿಎಂ ಆಗಿ ಮುಂದುವರೆಯಬೇಕೊ ಬೇಡವೋ..?

ಇನ್ನು ಇತ್ತೀಚೆಗೆ ವರುಣಾ ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಲೋಕಸಭೆಯಲ್ಲಿ ವರುಣಾ ಕ್ಷೇತ್ರದಿಂದ 60 ಸಾವಿರ ಲೀಡ್‌ ಬೇಕು ಎಂದು ಕೇಳಿದ್ದರು.. ನಾವು ಸಿಎಂ ಆಗಿ ಮುಂದುವರೆಯಬೇಕಾದರೆ ದೊಡ್ಡ ಮಟ್ಟದ ಲೀಡ್‌ ನಮ್ಮ ಕ್ಷೇತ್ರದಿಂದ ಕಾಂಗ್ರೆಸ್‌ಗೆ ಬೇಕು ಎಂದಿದ್ದರು.. ಈಗಿರುವಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಿಎಂ ಸ್ಥಾನದ ಮಾತಾಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ..

 

ಇದನ್ನೂ ಓದಿ; ಹಿಂಬಾಲಿಸಿ ಬಂದ ಬಾಲಕ; ಬಾಲಕಿಗೆ ರಸ್ತೆಯಲ್ಲೇ ಕಿಸ್‌ ಕೊಟ್ಟು ಓಡಿಹೋದ!

 

 

Share Post