ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಹೇಳಿಕೆ ವಿಚಾರ; ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?
ಗ್ಯಾರೆಂಟಿ ಯೋಜನೆಯಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ.. ಹೀಗಂತ ತುಮಕೂರು ಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿವಾದಿತ ಹೇಳಿಕೆ ನೀಡಿದ್ದರು.. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್, ಕುಮಾರಸ್ವಾಮಿ ವಿರುದ್ಧ ಮಹಿಳೆಯರನ್ನು ಬೀದಿಗಿಳಿಸಿ ಹೋರಾಟ ಶುರು ಮಾಡಿಸಿದೆ.. ಈ ವಿಚಾರ ಪ್ರತಿ ಪಕ್ಷಗಳ ಅಸ್ತ್ರವಾಗುತ್ತಿದ್ದಂತೆ ಕುಮಾರಸ್ವಾಮಿ ಎಚ್ಚೆತ್ತುಕೊಂಡಿದ್ದಾರೆ.. ದಿಢೀರ್ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿಯವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ.. ಯಾರಿಗಾದರೂ ಇದರಿಂದ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.. ಜೊತೆಗೆ ಕಾಂಗ್ರೆಸ್ ನಾಯಕರು ಈ ಹಿಂದೆ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆಗಳನ್ನು ಕೂಡಾ ಪ್ರಸ್ತಾಪ ಮಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ..
ಇದನ್ನೂ ಓದಿ; ಹೊಸ C-Voter ಸಮೀಕ್ಷೆ; ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು..?
ನಾನು ಹೆಣ್ಣು ಮಕ್ಕಳನ್ನು ಅವಮಾನಿಸಿಲ್ಲ;
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿಯವರು ನಾನು ಹೆಣ್ಣು ಮಕ್ಕಳನ್ನು ಅವಮಾನಿಸಿಲ್ಲ ಎಂದು ಹೇಳಿದ್ದಾರೆ.. ಮಹಿಳೆಯರ ಬದುಕು ಸರಿಪಡಿಸಬೇಕೆಂದು ನಾನು ಹೇಳಿದ್ದೇನೆ.. ಗಂಡನಿಂದ ಐದು ಸಾವಿರ ಕಿತ್ತುಕೊಂಡು ಪತ್ನಿಗೆ ಎರಡು ಸಾವಿರ ನೀಡಲಾಗುತ್ತಿದೆ.. ಈ ಮೂಲಕ ಮಹಿಳೆಯರನ್ನು ಸರ್ಕಾರ ದಾರಿ ತಪ್ಪಿಸುತ್ತಿದೆ ಎಂದು ಹೇಳಿದ್ದೇನೆ. ಆದ್ರೆ ಕಾಂಗ್ರೆಸ್‌ಗೆ ಮಾತಾಡೋಕೆ ಯಾವುದೇ ವಿಚಾರ ಇಲ್ಲ.. ಹೀಗಾಗಿ, ಇದನ್ನು ವಿವಾದ ಮಾಡುತ್ತಿದ್ದಾರೆ.. ಅವರ ಈ ತಂತ್ರಗಾರಿಕೆ ನಡೆಯೋದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ..
ಇದನ್ನೂ ಓದಿ; ಹಿಂಬಾಲಿಸಿ ಬಂದ ಬಾಲಕ; ಬಾಲಕಿಗೆ ರಸ್ತೆಯಲ್ಲೇ ಕಿಸ್ ಕೊಟ್ಟು ಓಡಿಹೋದ!
ಕಿಡ್ನ್ಯಾಪ್ ಮಾಡಿ ಜಮೀನು ಬರೆಸಿಕೊಂಡಾಗ ದುಃಖ ಆಗಲಿಲ್ಲವೇ..?
ಡಿ.ಕೆ.ಶಿವಕುಮಾರ್ ಈ ವಿಚಾರವಾಗಿ ದುಃಖವಾಗಿದೆ ಎಂದು ಹೇಳಿದ್ದಾರೆ.. ಆದ್ರೆ ಡಿ.ಕೆ. ಶಿವಕುಮಾರ್‌ಗೆ ಕೇಳ್ತೀನಿ, ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡಾಗ ನಿಮಗೆ ದುಃಖ ಆಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿ ಪಿಕ್ ಪ್ಯಾಕೇಟ್ ಗ್ಯಾರಂಟಿ ಎಂದು ಆರೋಪ ಮಾಡಿರುವ ಕುಮಾರಸ್ವಾಮಿ, ಮಂಡ್ಯದಲ್ಲಿ `ಗೋ ಬ್ಯಾಕ್ ಕುಮಾರಸ್ವಾಮಿ’ ಅಂತ ಹೋರಾಟ ಮಾಡಿದ್ದಾರೆ. ಹೋರಾಟದಲ್ಲಿದ್ದ ಹೆಣ್ಣು ಮಕ್ಕಳನ್ನು ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿಗೆ ಯಾಕೆ ಬಂದಿದ್ದೀವಿ ಗೊತ್ತಿಲ್ಲ ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದರು. ಹೇಮಾ ಮಾಲಿನಿ, ಕಂಗನಾ ಸೇರಿದಂತೆ ಹಲವು ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳಿದ್ದರು ಎಂಬುದರ ಬಗ್ಗೆಯೂ ಕುಮಾರಸ್ವಾಮಿ ಪ್ರಸ್ತಾಪ ಮಾಡಿದರು..
ಇದನ್ನೂ ಓದಿ; ಕಾರಿನಲ್ಲೇ ವಿದ್ಯಾರ್ಥಿ ಜೊತೆ ಶಿಕ್ಷಕಿಯ ರಾಸಲೀಲೆ; ಸಿಕ್ಕಿಬಿದ್ದ ಇಂಗ್ಲೀಷ್ ಟೀಚರ್!