CrimeDistricts

ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಉರುಳಿದ ಕಾರು; ರಾಯಚೂರಲ್ಲಿ ಪೊಲೀಸ್‌ ಜೀಪ್‌ ಪಲ್ಟಿ

ಬೆಂಗಳೂರು; ಇಂದು ಎರಡು ಕಡೆ ವಾಹನಗಳು ಪಲ್ಟಿಯಾಗಿವೆ.. ಮಂಡ್ಯದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಯಲ್ಲಿ ಪಲ್ಟಿ ಹೊಡೆದಿದೆ.. ಇನ್ನೊಂದು ಕಡೆ ಮರಳು ತುಂಬಾದ ವಾಹನ ಓವರ್‌ ಟೇಕ್‌ ಮಾಡಲು ಹೋಗಿ ಪೊಲೀಸ್‌ ಜೀಪ್‌ ಪಕ್ಕದ ಜಮೀನಿನಲ್ಲಿ ಪಲ್ಟಿ ಹೊಡೆದಿದೆ.. ಈ ಎರಡೂ ಘಟನೆಗಳಲ್ಲಿ ಏನೇನಾಯ್ತು..? ಇಲ್ಲಿದೆ ವಿವರ..

ಇದನ್ನೂ ಓದಿ; ಮತ್ತೆ ಡಿಕೆಶಿ ಬಾಯಲ್ಲಿ ಸಿಎಂ ಸ್ಥಾನದ ಮಾತು; ದೆಹಲಿಯಲ್ಲಾದ ತೀರ್ಮಾನ ಏನು..?

ಕಬ್ಬಿನ ಗದ್ದೆಗೆ ಉರುಳಿದ ಕಾರು;

ಮಂಡ್ಯ; ಮಂಡ್ಯ ಜಿಲ್ಲೆ ಪಾಂಡವಪುರ ಬಳಿ ಕಾರು ಪಲ್ಟಿ ಹೊಡೆದಿದೆ.. ಇಲ್ಲಿ ಚಿಕ್ಕಾಡೆ ಗ್ರಾಮದ ಬಳಿ ಕಾರಿನ ಸ್ಟಿಯರಿಂಗ್‌ ಲಾಕ್‌ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದೆ.. ಇದರಿಂದಾಗಿ ಕಾರು ಕಬ್ಬಿನ ಗದ್ದೆಗೆ ನುಗ್ಗಿದ್ದು, ಪಲ್ಟಿ ಹೊಡೆದಿದೆ.

ಮಂಡ್ಯದಿಂದ ಪಾಂಡವಪುರಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದವರು ಬೇಗ ಓಡಿ ಬಂದು ಕಾರು ಚಾಲಕನನ್ನು ರಕ್ಷಣೆ ಮಾಡಿದಾರೆ.. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅನಂತರ ಸಾರ್ವಜನಿಕರ ಸಹಕಾರಿಂದ ಕಾರನ್ನು ಮೇಲೆತ್ತಲಾಗಿದೆ.

ಇದನ್ನೂ ಓದಿ; ವರ್ಷಕ್ಕೊಮ್ಮೆಯಾದರೂ ಈ 6 ರಕ್ತ ಪರೀಕ್ಷೆಗಳನ್ನು ಎಲ್ಲರೂ ಮಾಡಿಸಿಕೊಳ್ಳಬೇಕು..!

ಓವರ್‌ ಟೇಕ್‌ ಮಾಡಲು ಹೋಗಿ ಪೊಲೀಸ್‌ ಜೀಪ್‌ ಪಲ್ಟಿ..!

ರಾಯಚೂರು; ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ರೈತನಗರ ಕ್ಯಾಂಪ್‌ ಬಳಿ ಪೊಲೀಸ್‌ ಜೀಪ್‌ ಪಲ್ಟಿಯಾಗಿದೆ.. ಘಟನೆಯಲ್ಲಿ ಹೋಮ್‌ ಗಾರ್ಡ್‌ ಹಾಗೂ ಪೊಲೀಸ್‌ ಪೇದೆ ಗಾಯಗೊಂಡಿದ್ದಾರೆ.. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಕ್ರಮವಾಗಿ ಟ್ರ್ಯಾಕ್ಟರ್‌ನಲ್ಲಿ ಮರಳು ತುಂಬಿಸಿಕೊಂಡು ಹೋಗಲಾಗುತ್ತಿತ್ತು.. ಈ ಹಿನ್ನೆಲೆಯಲ್ಲಿ ಪೊಲೀಸರು ಟ್ರ್ಯಾಕ್ಟರ್‌ ಹಿಡಿಯಲು ಹೋಗಿದ್ದಾರೆ.. ಟ್ರ್ಯಾಕ್ಟರ್‌ ಓವರ್‌ ಟೇಕ್‌ ಮಾಡುವ ವೇಳೆ ಪೊಲೀಸ್‌ ಜೀಪ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ..

ಇದನ್ನೂ ಓದಿ; ಹೊಸ C-Voter ಸಮೀಕ್ಷೆ; ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು..?

ಹೋಮ್‌ ಗಾರ್ಡ್ ಶಕ್ಷಾವಲಿ (33), ಪೇದೆ ಕರಿಯಪ್ಪ (35) ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸಿಂಧನೂರು ಟ್ರಾಫಿಕ್ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊನೆಗೂ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್‌ ಅನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ; ಹಿಂಬಾಲಿಸಿ ಬಂದ ಬಾಲಕ; ಬಾಲಕಿಗೆ ರಸ್ತೆಯಲ್ಲೇ ಕಿಸ್‌ ಕೊಟ್ಟು ಓಡಿಹೋದ!

Share Post