ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿಗೆ ತಿಂಗಳೊಂದಿಗೆ 2 ಲಕ್ಷ ಕೋಟಿ ರೂ. ಅನುದಾನ; ಗಡ್ಕರಿ
ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರ ರಸ್ತೆಗಳ ಅಭಿವೃದ್ಧಿ ಭೂಮಿ ಸ್ವಾಧೀಮ ಮಾಡಿಕೊಟ್ಟರೆ ಒಂದು ತಿಂಗಳೊಳಗೆ 2 ಲಕ್ಷ ಕೋಟಿ ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ನೀಡೋದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.. ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು..
ಕರ್ನಾಟಕದಲ್ಲಿ ರಸ್ತೆ ಕಾಮಗಾರಿಗೆ ನಾವು ಒಂದು ತಿಂಗಳೊಳಗೆ 2 ಲಕ್ಷ ಕೋಟಿ ರೂಪಾಯಿ ಮಂಜೂರು ಮಾಡಲು ನಾವು ಸಿದ್ಧರಿದ್ದೇವೆ.. ಆದ್ರೆ ರಾಜ್ಯ ಸರ್ಕಾರಕ್ಕೆ ನನ್ನದೊಂದು ಷರತ್ತೇನೆಂದರೆ ಈ ಕಾಮಗಾರಿಗಳಿಗೆ ಭೂಸ್ವಾಧೀನ ಮಾಡಿಕೊಡಬೇಕು.. ಅರಣ್ಯ ಇಲಾಖೆ ಮತ್ತಿತರ ಸಂಬಂಧಪಟ್ಟ ವಿಭಾಗಗಳಿಂದ ಅನುಮತಿ ಕೊಡಿಸಬೇಕು.. ಯಾಕಂದ್ರೆ ನಾವು ಗಾಳಿಯಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಾರೆ..
ಕರ್ನಾಟಕದಲ್ಲಿ ರಸ್ತೆ ಯೋಜನೆಗಳಿಗಾಗಿ ಅನೇಕ ಸಂಸದರು ನನ್ನನ್ನು ಭೇಟಿಯಾಗುತ್ತಾರೆ.. ಅವರಿಗಾಗಿ 3.5 ಲಕ್ಷ ಕೋಟಿ ರೂ.ಗಳ ಕಾಮಗಾರಿಯನ್ನು ಮಂಜೂರು ಮಾಡಿದ್ದೇನೆ. ಕೇಂದ್ರ ಸರ್ಕಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ ಎಂದೂ ಗಡ್ಕರಿ ಅವರು ಸ್ಪಷ್ಟಪಡಿಸಿದ್ದಾರೆ.