ಅಮರನಾಥ ಯಾತ್ರಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯಿಂದ ಯೋಗಾ ದಿನಾಚರಣೆ
ಜಮ್ಮು-ಕಾಶ್ಮೀರ; ವರ್ಷಕ್ಕೊಮ್ಮೆ ದರ್ಶನ ನೀಡುವ ಅಮರನಾಥ್ ಯಾತ್ರೆ ಆರಂಭವಾಗಿದೆ. ಈ ಯಾತ್ರೆಗೆ ಉಗ್ರರ ಬೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ಅಮರನಾಥ್ ಕಣಿವೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ, ಅಲ್ಲಿಯೇ ಯೋಗಾ ದಿನಾಚರಣೆ ಮಾಡಿದರು. ರಾಷ್ಟ್ರಧ್ವಜವನ್ನಿಟ್ಟು, ಯೋಗಾ ಮಾಡಿ, ವಿಶ್ವ ಯೋಗಾ ದಿನಾಚರಣೆಯನ್ನು ಆಚರಿಸಿದರು.