National

ಟ್ರ್ಯಾಕ್ಟರ್‌ ಓಡಿಸಿಕೊಂಡು ಮದುವೆ ಮಂಟಪಕ್ಕೆ ಬಂದ ವಧು

ಭೋಪಾಲ್; ವಧು-ವರರು ಮದುವೆ ಮಂಟಪಕ್ಕೆ ವಿಶೇಷವಾಗಿ ಎಂಟ್ರಿ ಕೊಡೋದು ಈಗ ಟ್ರೆಂಡ್‌.. ಅದೇ ತರಾ ಭೋಪಾಲ್‌ನಲ್ಲಿ ವಧುವೊಬ್ಬಳು ಮದುವೆ ಮಂಟಪಕ್ಕೆ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾಳೆ. ಆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಜಾವ್ರಾ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ವಧು ಈ ರೀತಿ ವಿಶೇಷವಾಗಿ ಎಂಟ್ರಿ ಕೊಟ್ಟಿದ್ದಾಳೆ. ವಧು ಭಾರತಿ ತಾಗ್ಡೆ ಕಪ್ಪು ಕನ್ನಡಕ ಧರಿಸಿ ಟ್ರ್ಯಾಕ್ಟರ್‌ನ್ನು ತಾನೇ ಚಲಾಯಿಸಿಕೊಂಡು ಮದುವೆ ಮಂಟಪಕ್ಕೆ ಬಂದಳು. ಟ್ರ್ಯಾಕ್ಟರ್‌ನಲ್ಲಿ ಆಕೆಯ ಇಬ್ಬರು ಸಹೋದರರು ಕುಳಿತಿದ್ದರು. ಇದನ್ನು ನೋಡಿದ ಅಲ್ಲಿ ನೆರೆದಿದ್ದ ಜನರು ಫುಲ್‌ ಖುಷಿಯಾದರು.

ಪಲ್ಲಕ್ಕಿ ಅಥವಾ ಕಾರಿನಲ್ಲಿ ಪ್ರವೇಶಿಸುವ ಪ್ರವೃತ್ತಿ ಹಳೆಯದಾಗಿದೆ. ಇದಿರಿಂದಾಗಿ ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸುತ್ತಿದ್ದೆ ಎಂದು ಭಾರತಿ ತಾಗ್ದೆ ತಿಳಿಸಿದರು.

Share Post