National

ಮೈಸೂರು ಯೋಗಾ ದಿನಾಚರಣೆಯ ಕೆಲ ಫೋಟೋಗಳು

ಮೈಸೂರು; ಮೈಸೂರಿನಲ್ಲಿ ನಡೆದ ವಿಶ್ವಯೋಗಾದಿನ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರಿಂದ ಕಾರ್ಯಕ್ರಕ್ಕೆ ಕಳೆ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿಯವರು 45 ನಿಮಿಷಗಳ ಕಾಲ ಯೋಗಾ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಚಿವರು, ಶಾಸಕರು, ಸಂಸದರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಅರಮನೆಗೆ ತೆರಳಿ, ರಾಜವಂಶಸ್ಥರಿಂದ ಆತಿಥ್ಯ ಸ್ವೀಕರಿಸಿದರು. ಬೆಳಗಿನ ಉಪಹಾರವನ್ನು ಅಲ್ಲೇ ಸೇವಿಸಿದರು.

ಇಂದಿನ ಮೈಸೂರು ಯೋಗಾ ದಿನದ ಕೆಲ ಫೋಟೋಗಳು ಇಲ್ಲಿವೆ..

Share Post