CrimeNational

ಗಂಡ-ಮಕ್ಕಳನ್ನು ಬಿಟ್ಟು ಮಾವನೊಂದಿಗೆ ಓಡಿ ಹೋದ ಮಹಿಳೆ..!

ಲಖನೌ; ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ.. ಇಲ್ಲಿಮ ಮೌ ಎಂಬಲ್ಲಿ ಸೊಸೆಯೊಬ್ಬಳು ಗಂಡ ಮಕ್ಕಳನ್ನು ಬಿಟ್ಟು ಮಾವನೊಂದಿಗೆ ಓಡಿಹೋಗಿದ್ದಾಳೆ.. ಸಾಲದೆಂಬಂತೆ ಹತ್ತಿರದ ದೇವಸ್ಥಾನ ಒಂದರಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ..

ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

10 ದಿನಗಳ ಹಿಂದೆ 70 ವರ್ಷದ ಮಾವನ ಜೊತೆ 35 ವರ್ಷದ ಸೊಸೆ ಓಡಿಹೋಗಿದ್ದಳು.. ಇದೀಗ ಅವರಿಬ್ಬರೂ ಭಾನುವಾರ ಗ್ರಾಮದ ಹತ್ತಿರದ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.. ಈ ವೇಳೆ ಹಲವು ಗ್ರಾಮಸ್ಥರು ಕೂಡಾ ಹಾಜರಿದ್ದರು ಎಂದು ತಿಳಿದುಬಂದಿದೆ..
ದೇವಸ್ಥಾನದ ಪಕ್ಕದ ಠಾಣೆಯ ಪೊಲೀಸರು ದೇವಸ್ಥಾನದ ಬಳಿ ಜನಜಂಗುಳಿಯನ್ನು ಕಂಡು ಅಲ್ಲಿಗೆ ತಲುಪಿದರು. ಅಲ್ಲಿ ಮಾವ, ಸೊಸೆ ಮದುವೆಯಾಗುತ್ತಿರುವುದನ್ನು ಕಂಡರೂ ಪೊಲೀಸರು ಅದನ್ನು ಪಡೆಯುವ ಪ್ರಯತ್ನ ಮಾಡಲಿಲ್ಲ ಎಂದು ತಿಳಿದುಬಂದಿದೆ..

ಇದನ್ನೂ ಓದಿ; 20 ಸೆಕೆಂಡ್‌ HUG ಮಾಡಿದರೆ ಹಲವಾರು ಆರೋಗ್ಯ ಪ್ರಯೋಜನಗಳು!

ಈ ವಿಚಿತ್ರ ಮದುವೆ ನದ್ವಾಸರೈ ಪ್ರದೇಶದ ಸರೈಸಾದಿ ಗ್ರಾಮದಲ್ಲಿ ನಡೆದಿದೆ. 70 ವರ್ಷದ ಹರಿಶಂಕರ್ ಎಂಬಾತನೇ ಸೊಸೆಯನ್ನು ಮದುವೆಯಾಗಿರುವ ವ್ಯಕ್ತಿ..

Share Post