ಪ್ರಧಾನಿ ಭದ್ರತಾಲೋಪ; ಪಂಜಾಬ್ ಸರ್ಕಾರದ ಸಮಿತಿ ಒಪ್ಪಲ್ಲ ಎಂದ ಬಿಜೆಪಿ
ಚಂಡಿಗಢ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಆದ ಭದ್ರತಾ ಲೋಪ ಪ್ರಕರಣ ಸಂಬಂಧ ಪಂಜಾಬ್ ಸರ್ಕಾರ ರಚಿಸಿರುವ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯವರು ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಅವರೇ ಸೂತ್ರದಾರರಾಗಿದ್ದಾರೆ. ಹೀಗಾಗಿ, ಈ ಸಮಿತಿಯಿಂದ ಸೂಕ್ತ ವರದಿ ಸಿಗುತ್ತದೆ ಎಂಬ ನಂಬಿಕೆ ನಮಗಿಲ್ಲ. ಹೀಗಾಗಿ ನಾವು ರಾಜ್ಯ ಸರ್ಕಾರ ರಚಿಸಿರುವ ತನಿಖಾ ಸಮಿತಿಯನ್ನು ನಾವು ಒಪ್ಪುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಹೇಳಿದ್ದಾರೆ.
ನಾವು ಈಗಾಗಲೇ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಭದ್ರತಾ ಲೋಪಕ್ಕೆ ಕಾರಣರಾದ ಪಂಜಾಬ್ ಗೃಹ ಸಚಿವ ಹಾಗೂ ಡಿಜಿಪಿಯನ್ನು ಅಮಾನತು ಮಾಡಬೇಕೆಂಬುದು ನಮ್ಮ ಆಗ್ರಹ. ಪ್ರಧಾನಿಗಳ ಪ್ರೋಟೋಕಾಲ್‌ನ್ನು ಯಾರೂ ಫಾಲೋ ಮಾಡಿಲ್ಲ. ಯಾರು ಪ್ರಧಾನಿಯವರ ಪ್ರಯಾಣದ ರೂಟ್‌ನ್ನು ಬಹಿರಂಗ ಮಾಡಿದರು. ಅದು ಸಾಬೀತಾಗಬೇಕು ಎಂದು ಆಗ್ರಹಿಸಲಾಯಿತು.