Sports

ವಿಶ್ವಕಪ್‌ ಮತ್ತು ನ್ಯೂಜಿಲೆಂಡ್‌ ಪ್ರವಾಸ – ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ

ನವದೆಹಲಿ : ಮಹಿಳಾ ವಿಶ್ವಕಪ್‌ ಮತ್ತು ನ್ಯೂಜಿಲೆಂಡ್‌ ಪ್ರವಾಸಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್‌ನಲ್ಲಿ ಭಾರತ ತಂಡದ ಮೊದಲ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಮಾರ್ಚ್‌ 6ರಂದು ಈ ಪಂದ್ಯ ನಡೆಯಲಿದೆ.

ಫೆಬ್ರುವರಿಯಲ್ಲಿ ನ್ಯೂಜಿಲೆಂಡ್‌  ವಿರುದ್ಧ ನಡೆಯಲಿರುವ ಒಂದು ಟಿ20 ಮತ್ತು ಐದು ಏಕದಿನ ಪಂದ್ಯಗಳಿಗೂ ಕೂಡ ತಂಡವನ್ನು ಪ್ರಕಟಿಸಲಾಗಿದೆ.

ಏಕದಿನ ಸರಣಿಗೆ ಮಿಥಾಲಿ ರಾಜ್‌ ನಾಯಕಿ ಆದರೆ, ಟಿ 20 ಪಂದ್ಯಕ್ಕೆ ಹರ್ಮನ್‌ ಪ್ರೀತ್‌ ಕೌರ್‌ ನಾಯಕಿ ಆಗಿದ್ದಾರೆ.

 

Share Post