CinemaNational

ಸೋನು ಸೂದ್‌ – ಹುಟ್ಟೂರಿನ ವಿದ್ಯಾರ್ಥಿನಿಯರಿಗೆ ಸೈಕಲ್‌ ವಿತರಣೆ

ಚಂಡೀಗಢ : ಕೊರೊನಾ ಮೊದಲ ಲಾಕ್‌ಡೌನ್‌ ಇಂದಲೂ ಸೋನು ಸೂದ್‌ ಅವರು ತಮ್ಮ ಸಮಾಜ ಮುಖಿ ಕೆಲಸಗಳಿಂದ ಗುರುತಿಸಿಕೊಂಡಿದ್ದಾರೆ. ಅಭಿಮಾನಿಗಳ ಪಾಲಿನ ರಿಯಲ್‌ ಹೀರೋ ಆಗಿರುವ  ಸೋನು ಸೂದ್‌ ಅವರು ಮತ್ತೊಂದು ಸಮಾಜ ಸೇವೆಯ ಮೂಲಕ ಅಭಿಮಾನಿಗಳ  ಮನಸ್ಸಲ್ಲಿ ಇನ್ನಷ್ಟು ಗಟ್ಟಿಯಾಗಿ ನಿಂತಿದ್ದಾರೆ.

ಸೋನು ಸೂದ್‌ ಅವರು ತಮ್ಮ ಹುಟ್ಟೂರಾದ ಪಂಜಾಬ್‌ನ ಮೊಗಾದಲ್ಲಿ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ನೀಡುವ, ʼಮೊಗಾ ಕಿ ಭೇಟಿʼ (ಮೊಗಾದ ಮಗಳು) ಹೆಸರಿನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.

ಸೂದ್‌ ಚಾರಿಟಿ ಫೌಂಡೇಶನ್‌ ವತಿಯಿಂದ ಮಾಳವಿಕಾ ಸೂದ್‌ (ಸೋನು ಸೂದ್‌ ಸಹೋದರಿ) ಮತ್ತು ಸೋನು ಸೂದ್‌ ಸೇರಿ ಸಾವಿರ ವಿದ್ಯಾರ್ಥಿನಿಯರು ಮತ್ತು ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್‍ಗಳನ್ನು ನೀಡಿದ್ದಾರೆ.

ಸೈಕಲ್‌ ವಿತರಣೆ ಬಗ್ಗೆ ಮಾತನಾಡಿದ ಸೋನು ಸೂದ್‌, ನಮ್ಮ ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಿ ಬರಲು ತುಂಬಾ ಕಷ್ಟವಾಗಿತ್ತು. ಅವರು ನಡೆದುಕೊಂಡೇ ಬರಬೇಕಿತ್ತು ಇಲ್ಲ ಯಾರ ಮೇಲಾದರೂ ಅವಲಮಬಿತರಾಗಿರಬೇಕಿತ್ತು. ಈ ಸಮಸ್ಯೆ ಬಗೆ ಹರಿಸಲು ನಾವು ನಮ್ಮ ಫೌಂಡೇಶನ್‌ ಇಂದ ಸೈಕಲ್‌ ವಿತರಣೆ ಮಾಡುತ್ತಿದ್ದೇವೆ. 8ನೇ ತರಗತಿಯಿಂದ 12ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿನಿಯರಿಗೆ ಸೈಕಲ್‍ಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಅಭಿಯಾನದಲ್ಲಿ ಈ ಸೈಕಲ್‍ಗಳನ್ನು ಸಾಮಾಜಿಕ ಕಾರ್ಯಕರ್ತರಿಗೂ ನೀಡುತ್ತೇವೆ ಎಂದಿದ್ದಾರೆ.

Share Post