CrimeNational

ಅಸ್ಸಾಂನಲ್ಲಿ ಬಸ್‌ ಹಾಗೂ ಟ್ರಕ್‌ ನಡುವೆ ಭೀಕರ ಅಪಘಾತ; 12 ಮಂದಿ ದುರ್ಮರಣ

ದಿಸ್ಪುರ್; ಅಸ್ಸಾಂನ ಗೋಲಾಘಾಟ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸ್‌ ಹಾಗೂ ಟ್ರಕ್‌ ನಡುವೆ ಅಪಘಾತ ಸಂಭವಿಸಿದ್ದು, 12 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, 25 ಮಂದಿ ಗಾಯಗೊಂಡಿದ್ದಾರೆ.

ಅಪಘಾತಕ್ಕೀಡಾದ ಬಸ್ ತಿಲಿಂಗ ಮಂದಿರದ ಕಡೆ ಹೋಗುತ್ತಿತ್ತು. ಬಲಿಜನ್‌ ಪ್ರದೇಶದ ಬಳಿ ಬಸ್‌ ಬಂದಾಗ ಎದುರಿಗೆ ಬಂದ ಡ್ರಕ್‌ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ಅತಿವೇಗದಲ್ಲಿದ್ದವು. ಈ ಹಿನ್ನೆಲೆಯಲ್ಲಿ ಎರಡೂ ವಾಹನಗಳು ಬಹುತೇಕ ನಜ್ಜುಗುಜ್ಜಾಗಿವೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post