Bengaluru

ರಾಜಕೀಯ ನಾಯಕರು ಸಮಾಜದ ಆಸ್ತಿ ಎಲ್ಲರೂ ಆರೋಗ್ಯವಾಗಿರಬೇಕು:ಈಶ್ವರಪ್ಪ

ಬೆಂಗಳೂರು: ಕಾಂಗ್ರೆಸ್‌  ನಾಯಕರ ಮೇಕೆದಾಟು ಪಾದಯಾತ್ರೆ ಬಗ್ಗೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಪಾದಯಾತ್ರೆಗೆ ನಮ್ಮ ಅಭ್ಯಂತರ ಏನು ಇಲ್ಲ. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ಬೇಡ ಅಂತಷ್ಟೆ ನಮ್ಮ ಮನವಿ. ಯಾಕಂದ್ರೆ ಕೊರೊನಾ ವೇಗವಾಗಿ ಹರಡುತ್ತಿದೆ ಹೀಗಿರುವಾಗ ಆರೋಗ್ಯ ಕೆಡಸಿಕೊಳ್ಳುವುದು ಸರಿಯೇ..? ನಮಗೆ ಯಡಿಯೂರಪ್ಪ, ಶ್ರೀರಾಮುಲು, ನಮ್ಮ ನಾಯಕರು ಆರೋಗ್ಯ ಹೇಗೆ ಮುಖ್ಯವೋ ಹಾಗೆ ಸಿದ್ದರಾಮಯ್ಯ, ಡಿ.ಕೆ.ಶುವಕುಮಾರ್‌ ಇತರೆ ನಾಯಕರ ಆರೋಗ್ಯವೂ ಮುಖ್ಯ. ರಾಜಕೀಯ ನಾಯಕರು ಈ ಸಮಾಜನ ಆಸ್ತಿ ಯಾರಿಗೂ ಏನೂ ಆಗಬಾರದು.  ಆ ಕಳಕಳಿಯಿಂದಲೇ ಮನವಿ ಮಾಡಿದ್ದೇವೆ ಪಾದಯಾತ್ರೆ ಕೈ ಬಿಡಿ.

ಇನ್ನೂ ಕೊರೊನಾ ನಿಯಮಾವಳಿಗಳಿಗೆ ಈಶ್ವರಪ್ಪ ವಿರೋಧಿಸಿದ್ದಾರೆ. ಸರ್ಕಾರದ ಈ ಆದೇಶ ರಾಜ್ಯಾದ್ಯಂತೆ ಪಾಲನೆ ಆಗ್ತಿದೆ ಎಂದು ಯಾರು ಹೇಳಿದ್ದು, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ನೈಟ್‌ ಕರ್ಫ್ಯೂ ಇಲ್ಲ ಸುಡುಗಾಡೂ ಇಲ್ಲ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಎಲ್ಲೆಲ್ಲಿ ಕೊರೊನಾ ಇದೆಯೋ ಅಲ್ಲಿ ಟೈಟ್‌ ರೂಲ್ಸ್‌ ಜಾರಿ ಮಾಡಲಿ. ಕೊರೊನಾ ಇಲ್ಲದೆ ಕಡೆ ರೂಲ್ಸ್‌ ಹಾಕಿದ್ರೆ ಜನರಿಗೆ ಕಷ್ಟ ಆಗುತ್ತೆ. ಈ ಬಗ್ಗೆ ನಾನು ಸಂಪುಟ ಸಭೆಯಲ್ಲಿ ಮಾತನಾಡುತ್ತೇನೆ ಎಂದು ಸಚಿವ ಈಶ್ವರಪ್ಪ ಹೇಳಿದ್ರು.

Share Post