National

ಮುಂಬೈನಲ್ಲಿ ಇನ್ಮುಂದೆ ವಾಟರ್‌ ಟ್ಯಾಕ್ಸಿ ಲಭ್ಯ

ಮುಂಬೈ : ನಾವಿ ಮುಂಬೈ ಮತ್ತು ದಕ್ಷಿಣ ಮುಂಬೈ ನಡುವೆ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಾಟರ್‌ ಟ್ಯಾಕ್ಸಿಯ ಸೇವೆಯನ್ನು ಶುರು ಮಾಡಲಾಗುತ್ತಿದೆ. ಜನವರಿ ೨೦೨೨ರಿಂದ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಫೆರ್ರಿ ವಾರ್ಫ್‌ನಲ್ಲಿರುವ ಡೊಮೆಸ್ಟಿಕ್‌ ಕ್ರೂಸ್‌ ಟರ್ಮಿನಲ್‌ ಮತ್ತು ಬೆಲಾಪುರ್‌ ಹಾಗೂ ನೆರೂಲ್‌ನಲ್ಲಿರುವ ಟರ್ಮಿನಲ್‌ನಿಂದ ವಾಟರ್‌ ಟ್ಯಾಕ್ಸಿ ಸೇವೆಯನ್ನು ಒದಗಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗ್ತಿದೆ.

ವಾಟರ್‌ ಟ್ಯಾಕ್ಸಿ ಸೇವೆಗೆ ಅಂತಾರಾಷ್ಟ್ರೀಯ ಕ್ರೂಸ್‌ ಟರ್ಮಿನಲ್‌, ಡೊಮೆಸ್ಟಿಕ್‌ ಕ್ರೂಸ್‌ ಟರ್ಮಿನಲ್‌, ಧರ್ಮತಾರ್‌ , ಕರಂಜಾಡೆ, ನೆರೂಲ್‌, ಐರೋಲಿ, ವಾಶಿ, ಖಂಡೇರಿ, ದ್ವೀಪಗಳು ಮತ್ತು ಜವಾಹರ್‌ಲಾಲ್‌ ಸೇರಿದಂತೆ ವಿವಿಧ ಮಾರ್ಗಗಳನ್ನು ಸರ್ಕಾರ ನಿಗದಿಪಡಿಸಿದೆ.

ಜನವರಿ ಮೊದಲ ವಾರದಿಂದಲೇ ಈ ಸೇವೆ ಆರಂಭವಾಗಲಿದ್ದು ಪ್ರಾಥಮಿಕ ಹಂತವಾಗಿ ಮೂರು ಆಪರೇಟರ್‌ ವ್ಯವಸ್ಥೆ ಮಾಡಲಾಗಿದೆ. 3 ತಿಂಗಳಲ್ಲಿ ನಾಲ್ಕನೇ ಆಪರೇಟರ್‌ ವ್ಯವಸ್ಥೆ ಮಾಡಲಾಗುವುದು.

Share Post