Cinema

ಮತ್ತೊಂದು ವೆಬ್‌ ಸೀರೀಸ್‌ನಲ್ಲಿ ಸಮಂತಾ

ದಿ ಫ್ಯಾಮಿಲಿ ಮ್ಯಾನ್‌ ವೆಬ್‌ ಸೀರೀಸ್‌ ನಿರ್ದೇಶಕರಾದ ಡಿಕೆ ಮತ್ತು ರಾಜ್‌ ಜೊತೆ ಸಮಂತಾ ಮತ್ತೊಂದು ವೆಬ್‌ ಸೀರೀಸ್‌ ಮಾಡಲಿದ್ದಾರೆ. ನಾಗಚೈತನ್ಯ ಜೊತೆ ವಿಚ್ಛೇದನ ಪಡೆದ ನಂತರ ಬಣ್ಣದ ಲೋಕದಲ್ಲಿ ಸಾಕಷ್ಟು ಆಕ್ಟೀವ್‌ ಆಗಿರುವ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪುಷ್ಪ ಸಿನಿಮಾದ ಐಟಂ ಹಾಡಿಗೆ ಹೆಜ್ಜೆ ಹಾಕಿ ಜನರ ಹುಬ್ಬೇರಿಸಿದ್ದರು.

ದಿ ಫ್ಯಾಮಿಲಿ ಮ್ಯಾನ್‌ ೨ ಸೀರೀಸ್ನಲ್ಲಿ ರಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಈಗ ಮತ್ತೊಂದು ಸೀರೀಸ್‌ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟನೆಯ ಅಮೆರಿಕದ ಸ್ಪೈ ಸರಣಿ ‘ಸಿಟಾಡೆಲ್​’ಅನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ರಾಜ್​ ಮತ್ತು ಡಿಕೆ ಹೊಸ ವೆಬ್​ ಸೀರಿಸ್​ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ವರುಣ್​ ಧವನ್​ ಮುಖ್ಯಭೂಮಿಕೆ ನಿರ್ವಹಿಸಿದರೆ, ಸಮಂತಾ ವರುಣ್​ಗೆ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

2022ರಲ್ಲಿ ಈ ಸರಣಿಯ ಕೆಲಸಗಳು ಆರಂಭವಾಗಲಿದೆ. ಇದೊಂದು ಆ್ಯಕ್ಷನ್​ ಸೀರಿಸ್​ ಆಗಿರಲಿದ್ದು, ಸಮಂತಾ, ವರುಣ್​ ಸೇರಿ ಬಹುತೇಕ ಕಲಾವಿದರು ವಿಶೇಷ ತರಬೇತಿ ಪಡೆದುಕೊಳ್ಳಲಿದ್ದಾರೆ. ಅದಾದ ಬಳಿಕವೇ ಶೂಟಿಂಗ್​ ಆರಂಭಗೊಳ್ಳಲಿದೆ. ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಸರಣಿ ಬಿಡುಗಡೆ ಆಗಲಿದೆ. ಇದು ಸಂಪೂರ್ಣ ಆಕ್ಷನ್‌ ಸರಣಿಯಾಗಿರಲಿದೆ.

Share Post