National

TTD ಅಧಿಕಾರಿ ಡಾಲರ್‌ ಶೇಷಾದ್ರಿ ಇನ್ನಿಲ್ಲ ; ಅವರಿಗೆ ಆ ಹೆಸರು ಬಂದಿದ್ದು ಹೇಗೆ..?

ವಿಶಾಖಪಟ್ಟಣಂ; ತಿರುಪತಿ ತಿರುಮಲದಲ್ಲಿ ಡಾಲರ್‌ ಶೇಷಾದ್ರಿ ಎಂದೇ ಹೆಸರಾಗಿದ್ದ ಟಿಟಿಡಿ ವಿಶೇಷ ಅಧಿಕಾರಿ ಶೇಷಾದ್ರಿ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಾರ್ತೀಕ ದೀಪೋತ್ಸವಕ್ಕಾಗಿ ಡಾಲರ್‌ ಶೇಷಾದ್ರಿಯವರು ವಿಶಾಖಪಟ್ಟಣಕ್ಕೆ ಆಗಮಿಸಿದ್ದರು. ಇಂದು ಬೆಳಗಿನ ಜಾವ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

1978ರಿಂದ ಡಾಲರ್‌ ಶೇಷಾದ್ರಿಯವರು ಟಿಟಿಡಿಯಲ್ಲಿ ಕೆಲಸ ಮಾಡುತ್ತಿದ್ದರು. 2007 ರಲ್ಲಿ ನಿವೃತ್ತಿ ಹೊಂದಿದರೂ ಕೂಡಾ ಡಾಲರ್‌ ಶೇಷಾದ್ರಿಯವರನ್ನು ಟಿಟಿಡಿ ವಿಶೇಷ ಅಧಿಕಾರಿ (OSD)ಆಗಿ ನೇಮಿಸಲಾಗಿತ್ತು. ನಿನ್ನೆ ಸಿಂಹಾದ್ರಿ ಅಪ್ಪನ್ನನ ದರ್ಶನ ಪಡೆದಿದ್ದ ಡಾಲರ್‌ ಶೇಷಾದ್ರಿ, ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

ಯಾರು ಈ ಡಾಲರ್‌ ಶೇಷಾದ್ರಿ..?

ಡಾಲರ್‌ ಶೇಷಾದ್ರಿ ಅವರು ಟಿಟಿಡಿಯಲ್ಲಿ ಉತ್ತರ ಪಾರುಪತ್ತೇದಾರರಾಗಿ ಕೆಲಸ ಮಾಡುತ್ತಿದ್ದರು. ಅನಂತರ ಅವರನ್ನು ಸೀನಿಯರ್‌ ಅಸಿಸ್ಟೆಂಟ್‌ ಆಗಿ, ಕೆಲ ವರ್ಷಗಳ ನಂತರ ಪತ್ತೇದಾರನಾಗಿ ಕೆಲಸ ಮಾಡಿದ್ದರು. 2007ರಲ್ಲಿ ಅವರು ಟಿಟಿಡಿಯಿಂದ ನಿವೃತ್ತಿ ಹೊಂದಿದ್ದರು. ಆದರೆ ಅತ್ಯಂತ ಪ್ರಭಾವ ಹೊಂದಿದ್ದ ಅವರು, ನಿವೃತ್ತಿ ನಂತರವೂ ಔಟ್‌ ಸೋರ್ಸಿಂಗ್‌ ಮೂಲಕ ಟಿಟಿಡಿ ದೇವಸ್ಥಾನದ OSD ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಇಪ್ಪತ್ತೊಂಬತ್ತು ವರ್ಷಗಳ ಸೇವೆಯಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು ಡಾಲರ್‌ ಶೇಷಾದ್ರಿ. ಪ್ರಭಾವಿ ಆಗಿದ್ದರಿಂದ ತಮ್ಮ ಕೆಲಸವಲ್ಲದಿದ್ದರೂ ವೆಂಕಟೇಶ್ವರ ಸ್ವಾಮಿಗಳ ಆಭರಣಗಳ ನಿರ್ವಹಣೆಯನ್ನೂ ಡಾಲರ್‌ ಶೇಷಾದ್ರಿಯವರೇ ಮಾಡುತ್ತಿದ್ದರು.

ಶೇಷಾದ್ರಿಯವರಿಗೆ ಡಾಲರ್‌ ಶೇಷಾದ್ರಿ ಎಂದು ಏಕೆ ಕರೆಯುತ್ತಾರೆ..?

ಶೇಷಾದ್ರಿಯವರು ತಮ್ಮ ಜಾತಕ ಚಕ್ರದಲ್ಲಿ ಮೇಕೆ ಚಿತ್ರವನ್ನು ಮಾಡಿಸಿ ಡಾಲರ್‌ ರೀತಿಯಲ್ಲಿ ಧರಿಸಿದ್ದರು. ಈ ಕಾರಣಕ್ಕಾಗಿ ಅವರ ಹೆಸರು ಡಾಲರ್‌ ಶೇಷಾದ್ರಿ ಎಂದು ಕರೆಯಲಾಗಿದೆ. ಕಡೆಯವರೆಗೂ ಇದೇ ಹೆಸರೇ ಅವರಿಗೆ ಖಾತ್ರಿಯಾಗಿತ್ತು.

  ಇನ್ನೊಂದು ಮಾಹಿತಿ ಪ್ರಕಾರ ಡಾಲರ್‌ ಶೇಷಾದ್ರಿಯವರು ತಿರುಪತಿ ದೇವಸ್ಥಾನದಲ್ಲಿ ದೇವರ ಬಂಗಾರದ ಡಾಲರ್‌ಗಳನ್ನು ಮಾರಾಟ ಮಾಡುತ್ತಿದ್ದರು. ಈ ವಿಭಾಗವನ್ನು ಅವರೇ ನೋಡಿಕೊಳ್ಳುತ್ತಿದ್ದರು. ಆದ್ದರಿಂದಲೇ ಅವರಿಗೆ ಡಾಲರ್‌ ಶೇಷಾದ್ರಿ ಎಂಬ ಹೆಸರು ಬಂತು ಎಂದು ಕೆಲವರು ಹೇಳುತ್ತಾರೆ.

  ಡಾಲರ್‌ ಶೇಷಾದ್ರಿಯವರಿಗೆ ಈ ಹಿಂದೆ ಬ್ರಹ್ಮೋತ್ಸವದ ವೇಳೆಯೂ ಎದೆನೋವು ಕಾಣಿಸಿಕೊಂಡಿತ್ತು. ಅನಂತರವೂ ಅವರು ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಿರಲಿಲ್ಲ ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ.

Share Post