National

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಗಳಿಸಿದ ಮತ ಮೌಲ್ಯವೆಷ್ಟು..?

ನವದೆಹಲಿ; ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ಆಗಿದ್ದಾರೆ. ಈ ಮೂಲಕ ಭಾರತದ ಬುಡಕಟ್ಟು ಜನಾಂಗದ ಮಹಿಳೆ ಮೊದಲ ರಾಷ್ಟ್ರಪತಿಯಾದಂತಾಗಿದೆ.  ಅಂದಹಾಗೆ ಚಲಾವಣೆಯಾದ ಮತಗಳ ಪೈಕಿ, ಗೆಲುವು ಸಾಧಿಸಲು 5,43,000 ಮತ ಮೌಲ್ಯ ಪಡೆಯುವ ಅಗತ್ಯವಿತ್ತು. ಅಂದರೆ ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯಬೇಕಿತ್ತು. ಆದ್ರೆ ದ್ರೌಪದಿ ಮುರ್ಮು ಅವರು ಶೇ.64ರಷ್ಟು ಮತಗಳನ್ನು ಪಡೆದು ಭರ್ಜರಿಯಾಗಿ ಗೆಲುವು ದಾಖಲಿಸಿದ್ದಾರೆ.

 

ದ್ರೌಪದಿ ಮುರ್ಮು ಅವರು 6,76,803 ಮತ ಮೌಲ್ಯವನ್ನು ಪಡೆದರೆ, ಯಶವಂತ್‌ ಸಿನ್ಹಾ ಅವರು 3,80,177 ಮತಗಳು ಅಂದರೆ ಶೇ.35.97 ರಷ್ಟು ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ.  ಇದೇ ಜುಲೈ 25ರಂದು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದ್ರೌಪದಿ ಮುರ್ಮ ಗೆಲುವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರ ಸಚಿವರು ಅಭಿನಂದನೆ ತಿಳಿಸಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುತ್ತಿದ್ದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

 

Share Post