ಸೇನಾ ವಾಹನಗಳ ಮೇಲೆ ಉಗ್ರರ ಕರಿನೆರಳು : ಐಇಡಿ ಸ್ಫೋಟ
ಕುಲ್ಗಾಮ್ : ಭಾರತದ ಮೇಲೆ ಉಗ್ರರ ಕರಿನೆರಳು ಹಿಂಬಾಲಿಸುತ್ತಲೇ ಇದೆ. ದಿನಂಪ್ರತಿ ಒಂದಲ್ಲಾ ಒಂದು ದುರಂತ ಸಂಭವಿಸಲು ಉಗ್ರರೇ ಕಾರಣ. ಹಗಲು-ರಾತ್ರಿಯೆನ್ನದೆ ಯೋಧರು ಗಡಿ ಕಾಯುತ್ತಿದ್ದರೂ ಅವರ ಅಟ್ಟಹಾಸ ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು ಕೂಡಾ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಪೋಟಿಸಿದ್ದಾರೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಯಾರಿಪೋರಾ ಮತ್ತು ಖೈಮೂಹ್ ನಡುವಿನ ಪ್ರದೇಶವಾದ ಜಿಯಾರತ್ ಖೈಮೊಹ್-ಕದರ್ ರಸ್ತೆಯಲ್ಲಿ ಉಗ್ರರು ಇಂದು ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕವನ್ನು ಸ್ಫೋಟಿಸಿದ್ದಾರೆ. ಘಟನೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಭಾರತೀಯ ಸೇನೆಯ ತುಕಡಿ ಸ್ಥಳಕ್ಕಾಗಮಿಸಿ ಘಟನೆ ನಡೆದ ಪ್ರದೇಶವನ್ನು ಸುತ್ತುವರಿದು ಮತ್ತಷ್ಟು ಭದ್ರತೆಯನ್ನು ನಿಯೋಜನೆ ಮಾಡಿದ್ದಾರೆ.
Jammu & Kashmir | IED blast by terrorists between Yaripora & Qaimooh road in Kulgam district. No injury/damage reported, area cordoned off. Searches launched, details awaited: Police sources
— ANI (@ANI) January 18, 2022