CrimeNational

ಹೊತ್ತಿ ಉರಿಯುತ್ತಿರುವಾಗಲೇ ಚಲಿಸಿದ ಕಾರು!

ಜೈಪುರ; ಕಾರೊಂದು ಚಲಿಸುವಾಗಲೇ ಬೆಂಕಿ ಹೊತ್ತಿಕೊಂಡಿದ್ದು, ಚಾಲಕನಿಲ್ಲದೆ ಉರಿಯುತ್ತಿದ್ದ ಕಾರು ರಸ್ತೆಯಲ್ಲಿ ಓಡಾಡಿದೆ.. ಇದರಿಂದಾಗಿ ಸ್ಥಳದಲ್ಲಿ ಸಾಕಷ್ಟು ಆತಂಕದ ವಾತಾವರಣ ನಿರ್ಮಾಣವಾಗಿತ್ತು.. ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ..
ಜೈಪುರದ ಸೋಡಾಲಾ ಸಬ್ಜಿ ಮಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.. ಕಾರಿನಲ್ಲಿ ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಕಾರಿನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾನೆ.. ಆದ್ರೆ ಕಾರು ನಿಲ್ಲಿಸಲಾಗಿಲ್ಲ.. ಹೀಗಾಗಿ ಹೊತ್ತಿ ಉರಿಯುತ್ತಲೇ ಕಾರು ಅಡ್ಡಾದಿಡ್ಡಿ ಚಲಿಸಿದೆ.. ಬೆಂಕಿ ಹೊತ್ತಿಕೊಂಡು ಕಾರು ಬರುತ್ತಿರುವುದನ್ನು ನೋಡಿ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.. ಕೊನೆಗೆ ಕಾರು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.. ಅಲ್ಲಿಯೇ ನಿಂತಿದೆ.. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ..

Share Post