CrimeNational

ಮೊಬೈಲ್‌ ಮುಟ್ಟಬೇಡ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ!

ಮುಂಬೈ; ದಿನಾ ಪೂರ್ತಿ ಮೊಬೈಲ್‌ ನೋಡುತ್ತಿದ್ದ ಮಗಳನ್ನು ತಾಯಿ ಬೈದಿದ್ದಾಳೆ.. ಇದರಿಂದ ಮನನೊಂದ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಮಹಾರಾಷ್ಟ್ರದ ಥಾಣೆಯ ಅಂಬರನಾಥ ಪ್ರದೇಶದಲ್ಲಿ ಈ ಘಟನೆ ನಡೆದಿದೆ.. 15 ವರ್ಷದ ಬಾಲಕಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಬಾಲಕಿ ಓದದೇ ದಿನವೂ ಮೊಬೈಲ್‌ನಲ್ಲಿ ಕಾಲಕಳೆಯುತ್ತಿದ್ದಳು.. ಮೊಬೈಲ್‌ ಇಲ್ಲದೆ ಒಂದು ನಿಮಿಷವೂ ಇರುತ್ತಿರಲಿಲ್ಲ.. ಇದ್ರಿಂದ ತಾಯಿ ದಂಡಿಸಿದ್ದಾಳೆ.. ಮೊಬೈಲ್‌ ನೋಡದಂತೆ ಎಚ್ಚರಿಕೆ ಕೊಟ್ಟಿದ್ದಾಳೆ.. ಇದರಿಂದ ಬಾಲಕಿ ಮನನೊಂದು ವಿಷ ಕುಡಿದಿದ್ದಾಳೆ.. ಸೆಪ್ಟೆಂಬರ್‌ 26ರಂದು ಬಾಲಕಿ ವಿಷ ಕುಡಿದಿದ್ದಳು.. ಆಕೆಯನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದ್ರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ..

Share Post