National

ಮೆಟ್ರೋನಲ್ಲಿ ದೆಹಲಿ ವಿಶ್ವವಿದ್ಯಾಲಯಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿ ಗಮನ ಸೆಳೆದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಬೇಕಿತ್ತು. ಹೀಗಾಗಿ ಅವರು ಅಲ್ಲಿಗೆ ಹೋಗಲು ಇಂದು ಮೆಟ್ರೋ ಬಳಸಿದರು.

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭ ಇತ್ತು. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೆಟ್ರೋ ಬಳಸಿದ ಮೋದಿ, ಟಿಕೆಟ್‌ ಕೌಂಟರ್‌ಗೆ ಹೋಗಿ ಟಿಕೆಟ್‌ ಪಡೆದರು. ಅದನ್ನು ಬಳಸಿಯೇ ಅವರು ಪ್ರಯಾಣ ಮಾಡಿದರು. ಇದೇ ವೇಳೆ ಸಹ ಪ್ರಯಾಣಿಕರ ಜೊತೆ ಅವರು ಸಂವಾದವನ್ನು ಕೂಡಾ ಮಾಡಿದರು.

Share Post