BengaluruCrime

ಬಿಯರ್‌ ಬಾಟಲ್‌ನಿಂದ ಚುಚ್ಚಿ ಯುವಕನ ಹತ್ಯೆ!

ಬೆಂಗಳೂರು; ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್‌ ನಡೆದಿದೆ.. ಇತ್ತೀಚೆಗೆ ಬಾರ್‌ ಒಂದರ ಕ್ಯಾಶಿಯರ್‌ ಮೇಲೆ ಕೊಲೆ ಯತ್ನ ನಡೆದಿತ್ತು.. ಇದೀಗ ಮತ್ತೊಂದು ಕೊಲೆ ನಡೆದಿದೆ.. ಕುಡಿದ ಮತ್ತಿನಲ್ಲಿ ಬಿಯರ್‌ ಬಾಟಲ್‌ನಿಂದ ಚುಚ್ಚಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ..
ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿಯ ಕಲಾ ವೈನ್ಸ್‌ ನಲ್ಲಿ ಈ ಘಟನೆ ನಡೆದಿದೆ.. ಯೋಗೇಂದರ್‌ ಸಿಂಗ್‌ ಅಲಿಯಾಸ್‌ ಸೋನು ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾರೆ.. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ..
ಕುಡಿದು ಮತ್ತಿನಲ್ಲಿದ್ದ ದುಷ್ಕರ್ಮಿಗಳು ಬಿಯರ್‌ ಬಾಟಲ್‌ ಅದರಿಂದ ಯೋಗೇಂದ್ರರ್‌ ಸಿಂಗ್‌ ಅಲಿಯಾಸ್‌ ಸೋನುಗೆ ಚುಚ್ಚಿದ್ದಾರೆ.. ಇದರಿಂದ ತೀವ್ರ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.. ಡಿಸಿಪಿ ಗಿರೀಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

Share Post