CinemaNational

ತೆಲುಗು ನಟ ರಾಜಶೇಖರ್‌ ದಂಪತಿಗೆ ಒಂದು ವರ್ಷ ಜೈಲು ಶಿಕ್ಷೆ

ಹೈದರಾಬಾದ್‌; ತೆಲುಗಿನ ಖ್ಯಾತ ನಟ ರಾಜಶೇಖರ್‌ ಹಾಗೂ ಅವರ ಪತ್ನಿ ಜೀವಿತಾಗೆ ಹೈದರಾಬಾದ್‌ನಲ್ಲಿ ನಾಂಪಲ್ಲಿ ಕೋರ್ಟ್‌ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಚಿರಂಜೀವಿ ಬ್ಲಡ್‌ ಬ್ಯಾಂಕ್‌ನಲ್ಲಿ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು 2011ರಲ್ಲಿ ರಾಜಶೇಖರ್‌ ದಂಪತಿ ಆರೋಪ ಮಾಡಿದ್ದರು. ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಅಲ್ಲು ಅರವಿಂದ್‌ ಅವರು ಕೇಸ್‌ ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌, ರಾಜಶೇಖರ್‌ ಹಾಗೂ ಅವರ ಪತ್ನಿ ಜೀವಿತಾಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತು. ಆದ್ರೆ, ಅವರಿಗೆ ಕೂಡಲೇ ಜಾಮೀನು ಕೂಡಾ ಮಂಜೂರಾಗಿದ್ದರಿಂದ ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಂಡಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ ಅವರು ತಮ್ಮ ಹೆಸರಿನಲ್ಲಿ ಬ್ಲಡ್‌ ಬ್ಯಾಂಕ್‌ ಸ್ಥಾಪನೆ ಮಾಡಿದ್ದು, ರೋಗಿಗಳಿಗೆ ನೆರವಾಗುತ್ತಿದ್ದಾರೆ. ಆದ್ರೆ ಖ್ಯಾತ ನಟ ರಾಜಶೇಖರ್‌ ಹಾಗೂ ಅವರ ಪತ್ನಿ ಜೀವಿತಾ ಅವರು, ಚಿರಂಜೀವಿ ಬ್ಲಡ್‌ ಬ್ಯಾಂಕ್‌ಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ, ಚಿರಂಜೀವಿ ಅವರ ಬಾವ ಅಲ್ಲು ಅರವಿಂದ್‌ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

Share Post